Select Your Language

Notifications

webdunia
webdunia
webdunia
webdunia

5 ಸ್ಟಾರ್ ಹೋಟೆಲ್ ಮೇಲೆ ಬಾಂಬ್ ಬೆದರಿಕೆ !

5 ಸ್ಟಾರ್ ಹೋಟೆಲ್ ಮೇಲೆ ಬಾಂಬ್ ಬೆದರಿಕೆ !
ಚಂಡೀಗಢ , ಬುಧವಾರ, 14 ಸೆಪ್ಟಂಬರ್ 2022 (08:03 IST)
ಚಂಡೀಗಢ  : 5 ಸ್ಟಾರ್ ಹೋಟೆಲ್ ಒಂದಕ್ಕೆ ಬಾಂಬ್ ಬೆದರಿಕೆ ಬಂದಿರುವ ಘಟನೆ ಹರಿಯಾಣದ ಗುರುಗ್ರಾಮದರಲ್ಲಿ ನಡೆದಿದೆ.

ಬೆದರಿಕೆ ಹಿನ್ನೆಲೆ ಪೊಲೀಸರು ಹೋಟೆಲ್ನಲ್ಲಿ ತೀವ್ರ ಶೋಧ ನಡೆಸಿದ್ದಾರೆ. ಗುರುಗ್ರಾಮದ ಆಂಬಿಯನ್ಸ್ ಮಾಲ್ ಕಾಂಪ್ಲೆಕ್ಸ್ನಲ್ಲಿರುವ ಲೀಲಾ ಹೋಟೆಲ್ಗೆ ಬೆಳಗ್ಗೆ 11:35ಕ್ಕೆ ದೂರವಾಣಿ ಮೂಲಕ ಬಾಂಬ್ ಬೆದರಿಕೆ ಕರೆ ಬಂದಿದೆ.

ಬೆದರಿಕೆ ಕರೆಯನ್ನು ಸ್ವೀಕರಿಸುತ್ತಲೇ ಹೋಟೆಲ್ನಲ್ಲಿದ್ದವರು ಭಯಭೀತರಾಗಿದ್ದಾರೆ. ತಕ್ಷಣ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳ ಆಗಮಿಸಿದೆ.
ಹೋಟೆಲ್ನಲ್ಲಿದ್ದವರನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸಲಾಗಿದ್ದು, ಸ್ಥಳದಲ್ಲಿ ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.


Share this Story:

Follow Webdunia kannada

ಮುಂದಿನ ಸುದ್ದಿ

ಮುಲಾಜಿಲ್ಲದೆ ರಾಜಕಾಲುವೆ ತೆರವು : ಬೊಮ್ಮಾಯಿ