Publish Date: Tue, 13 Sep 2022 (14:15 IST)
Updated Date: Tue, 13 Sep 2022 (14:17 IST)
ಹೊಟೇಲ್‌ಗಳಲ್ಲಿ ತಯಾರಿಸಿದ ಆಹಾರದಲ್ಲಿ ಹಲ್ಲಿ ಜಿರಳೆಗಳು ಸಿಕ್ಕಿದಂತಹ ಹಲವು ಘಟನೆಗಳು ನಡೆದಿದ್ದವು. ಆದರೆ ಈಗ ತಮಿಳುನಾಡಿನ ಖ್ಯಾತ ರೆಸ್ಟೋರೆಂಟ್ ಒಂದರ ತರಕಾರಿ ತಿನಿಸಿನಲ್ಲಿ ಇಲಿಯ ತಲೆಯೊಂದು ಸಿಕ್ಕಿದ್ದು, ಊಟ ಮಾಡುವರನ್ನು ಆಘಾತಕ್ಕೊಳಗಾಗುವಂತೆ ಮಾಡಿದೆ.
ಮುರಳಿಯ ಸಂಬಂಧಿಕರು ಇಲಿಯ ತಲೆಯೊಂದಿಗೆ ಹೊಟೇಲ್‌ಗೆ(Restaurent) ಆಗಮಿಸಿ ಹೊಟೇಲ್‌ನವರನ್ನು ಈ ಬಗ್ಗೆ ಪ್ರಶ್ನಿಸಿದ್ದಾರೆ. ಈ ವೇಳೆ ನಾವು ನಿಮಗೆ ಆಹಾರವನ್ನು ಕಳುಹಿಸಿ ಆರು ಗಂಟೆಗಳೇ ಕಳೆದಿವೆ. ಈಗ ಬಂದು ಆಹಾರದಲ್ಲಿ ಇಲಿ ಇದೆ ಎಂದರೆ ಒಪ್ಪಿಕೊಳ್ಳಲಾಗದು ಎಂದು ಹೊಟೇಲ್‌ನವರು ಹೇಳಿದ್ದಾರೆ. ಇದು ದೊಡ್ಡ ವಾಗ್ವಾದಕ್ಕೆ ಕಾರಣವಾಯಿತು. ಈ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಹೊಟೇಲ್ ಹಾಗೂ ಮುರಳಿ (murali) ತಂಡದ ನಡುವೆ ಮಾತುಕತೆ ನಡೆಸಿ ಸಂಧಾನಕ್ಕೆ ಮುಂದಾದರು, ನಂತರ ಆಹಾರವನ್ನು ಆಹಾರ ಸುರಕ್ಷತಾ ಇಲಾಖೆಗೆ (Food Safety Department) ಪರಿಶೀಲನೆಗೆ ಕಳುಹಿಸಿದ್ದಾರೆ. ಈ ಮಧ್ಯೆ ಮುರಳಿ ಅವರು ಹೊಟೇಲ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.