Select Your Language

Notifications

webdunia
webdunia
webdunia
webdunia

ವೋಟರ್ಸ್ ಇದೀಗ ಫೈಟರ್ಸ್ ..!!! ಶಾಸಕನಿಗೆ ಕ್ಲಾಸ್

ವೋಟರ್ಸ್ ಇದೀಗ ಫೈಟರ್ಸ್ ..!!! ಶಾಸಕನಿಗೆ ಕ್ಲಾಸ್
ಬೆಂಗಳೂರು , ಸೋಮವಾರ, 12 ಸೆಪ್ಟಂಬರ್ 2022 (16:12 IST)
ಬಾಗಲಕೋಟೆಯ ಸೀತಿಮನಿ ತಾಂಡಾದಲ್ಲಿ ಈ ಘಟನೆ ನಡೆದಿದ್ದು, ಶಾಸಕ ವೀರಣ್ಣ ಚರಂತಿಮಠ ಜೊತೆ ಗ್ರಾಮಸ್ಥರು ವಾಗ್ವಾದ ನಡೆಸಿಕೊಂಡಿದ್ದಾರೆ
 
ಸೀತಿಮನಿ ತಾಂಡಾದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆಗಾಗಿ ಶಾಸಕ ವೀರಣ್ಣ ಚರಂತಿಮಠ ಆಗಮಿಸಿದ್ದರು.ಈ ಸಂದರ್ಭದಲ್ಲಿ ಕೆಲವರು ಊರ ಒಳಗೆ ಭೂಮಿ ಪೂಜೆ ಮಾಡುವಂತೆ ವಾದ ಮಂಡಿಸಿದರು.ಇನ್ನು ಹಲವರು ಊರ ಹೊರಗೆ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸುವಂತೆ ಆಗ್ರಹಿಸಿದರು.ಇದೇ ವಿಚಾರವಾಗಿ ಕೆಲ ಕಾಲ ಎರಡು ಗುಂಪುಗಳ ನಡುವೆ ವಾದ-ಪ್ರತಿವಾದ ನಡೆದವು.
 
ಇದೇ ಸಮಯಕ್ಕೆ ಕೆಲ ಗ್ರಾಮಸ್ಥರು, ನೀವು ಇದುವರೆಗೂ ಗೆದ್ದಿದ್ದೀರಾ,ಏನ್ ಅಭಿವೃದ್ಧಿ ಮಾಡಿದ್ದೀರಾ?ಎಂದೆಲ್ಲಾ ಪ್ರಶ್ನಿಸಿದರು.ಆಗ ಪಿತ್ತ ನೆತ್ತಿಗೆರಿಸಿಕೊಂಡ ಶಾಸಕ ವೀರಣ್ಣ ಚರಂತಿಮಠ,ಯಾಕೇ ಮಾಡಿಲ್ಲ.ಇದುವರೆಗೂ ಮಾಡಿದ್ದೇನು?ಮುಂದೆ ಯಾರೋ ಬರ್ತಾರೋ ಅವರ ಹತ್ತಿರ ಅಭಿವೃದ್ಧಿ ಮಾಡಿಸಿಕೊಳ್ಳಿ ಎಂದು ಅವರನೆಲ್ಲಾ ತರಾಟೆಗೆ ತೆಗೆದಕೊಂಡರು.ಆದರೆ ಇದಕ್ಕೆ ತೀರುಗೇಟು ಕೊಟ್ಟ ಆ ಗ್ರಾಮಸ್ಥರು ನಾವ್ ಓಟ್ ಹಾಕಿರೋದು ನಿಮಗೆ? ನೀವೇ ಅಭಿವೃದ್ಧಿ ಮಾಡಬೇಕು ಎಂದು ಟಾಂಗ್ ನೀಡಿದರು.
 
ಇನ್ನು ಗ್ರಾಮಸ್ಥರ ತರಾಟೆಯಿಂದ ಗಲಿಬಿಲಿಗೊಂಡ ಶಾಸಕ ವೀರಣ್ಣ ಚರಂತಿಮಠ ಕಾರನ್ನೇರಿ ಅಲ್ಲಿಂದ ತೆರಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ವಿಮಾನ ಪ್ರಯಾಣಿಸುತ್ತಿರುವಾಗ ಮೃತಪಟ್ಟ ಮಹಿಳೆ ಹೃದಯವಿದ್ರಾವಕ ಘಟನೆ ...!!!!