Select Your Language

Notifications

webdunia
webdunia
webdunia
webdunia

ರ್ಯಾಡಿಸನ್ ಬ್ಲೂ ಹೋಟೆಲ್ ನಲ್ಲಿ ಕಾಂಗ್ರೇಸ್ ಶಾಸಕರ ಸಭೆ

ರ್ಯಾಡಿಸನ್ ಬ್ಲೂ ಹೋಟೆಲ್ ನಲ್ಲಿ ಕಾಂಗ್ರೇಸ್ ಶಾಸಕರ ಸಭೆ
bangalore , ಮಂಗಳವಾರ, 13 ಸೆಪ್ಟಂಬರ್ 2022 (20:42 IST)
ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯುತ್ತಿರುವುದರಿಂದ ಒಬ್ಬೊಬ್ಬರಾಗಿಯೇ ಶಾಸಕರು ರ್ಯಾಡಿಸನ್ ಬ್ಲೂ ಹೋಟೆಲ್ ಗೆ ಆಗಮಿಸುತ್ತಿದಾರೆ.
 
ಎರಡು ವಾರಗಳ ವಿಧಾನ ಮಂಡಲ ಅಧಿವೇಶನ‌ ನಡೆಯುತ್ತಿರುವುದರಿಂದ ಖಾಸಗಿ ಹೊಟೇಲ್ ನಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಸಿದೆ.ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರೊಂದಿಗೆ ಸಭೆ ನಡೆಯುತ್ತಿದೆ.ಇದೇ ವೇಳೆ ಮಾಜಿ ಶಾಸಕರು, ಮಾಜಿ ಸಚಿವರು, ಪರಾಜಿತ ಅಭ್ಯರ್ಥಿಗಳ ಸಭೆಯನ್ನೂ ಕೈ ನಾಯಕರು ಕರೆದಿದ್ದಾರೆ.ಹೀಗಾಗಿ ವಿಧಾನಸಭೆಯಲ್ಲಿ ಹೋರಾಟ ನಡೆಸಬೇಕಾದ ವಿಷಯಗಳ ಕುರಿತು‌ ಶಾಸಕರು, ಪರಿಷತ್ ಸದಸ್ಯರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ.
 
ಸದನದ ಒಳಗೂ ಸದನದ ಹೊರಗೂ ಹೋರಾಟ ನಡೆಸುವ ಕುರಿತು ಗಂಭಿರ ಚರ್ಚೆಯಾಗ್ತಿದೆ.ಬಿಜೆಪಿಯ ಭ್ರಷ್ಟಾಚಾರ ವಿಚಾರ, ಕಮಿಷನ್ ಆರೋಪ, ನೇಮಕಾತಿ ಅಕ್ರಮ, ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರದ ಲೋಪ ಸೇರಿದಂತೆ ಹಲವು ವಿಚಾರಗಳ ಚರ್ಚೆಯಾಗ್ತಿದ್ದು,ಶಾಸಕಾಂಗ ಸಭೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಡಿಸಿಎಂ ಜಿ.ಪರಮೇಶ್ವರ್, ಆರ್.ವಿ ದೇಶಪಾಂಡೆ, ಯು.ಟಿ ಖಾದರ್, ಎಸ್.ಎಸ್ ಮಲ್ಲಿಕಾರ್ಜುನ್, ಮಂಜುನಾಥ್, ಶಿವಾನಂದ್ ಪಾಟೀಲ್, ಪ್ರಿಯಾಂಕ್ ಖರ್ಗೆ ಆಗಮಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಧಾನ ಪರಿಷತ್ ಕಲಾಪ ವೀಕ್ಷಣೆ ಮಾಡಿದ ಮಲಕಾಪೂರೆ ಕುಟುಂಬಸ್ಥರು