ಮಹದೇವಪುರ,ಶಾಂತಿನಿಕೇತನದಲ್ಲಿ ಒತ್ತುವರಿ ಕಾರ್ಯಬಿರುಸಾಗಿ ಸಾಗುತ್ತಿದೆ.ಒತ್ತುವರಿ ಮೇಲೆ ಬುಲ್ಡೋಜರ್ ಘರ್ಜನೆ ಮಾಡುತ್ತಿದೆ.
ಶಾಂತಿನಿಕೇತನ ಲೇಔಟ್ ನಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತಿದೆ.ಬಿಬಿಎಂಪಿ ಅಧಿಕಾರಿಗಳು ತೆರವು ಕಾರ್ಯಾಚರಣೆ ಆರಂಭ ಮಾಡಿದ್ದಾರೆ.ಅಲ್ಲದೇ ಸ್ಥಳದಲ್ಲಿ ಭದ್ರತೆಗಾಗಿ ಪೊಲೀಸರ ನಿಯೋಜನೆ ಕೂಡ ಮಾಡಲಾಗಿದೆ.
ಬೆಳ್ಳಂದೂರು ಕೆರೆಯಿಂದ ವರ್ತೂರು ಕೆರೆಗೆ ಸಂಪರ್ಕ ಕಲ್ಪಿಸೋ ಕಾಲುವೆ ಒತ್ತುವರಿ ಮಾಡಿ ಮನೆಗಳ ನಿರ್ಮಾಣಮಾಡಲಾಗಿದೆ.ಇಂದು ಈ ಭಾಗದಲ್ಲಿ ಒತ್ತುವರಿ ತೆರವಿಗೆ ನಿರ್ಧಾರ ಮಾಡಿದೆ,2000 ನೇ ಇಸವಿಯಲ್ಲಿ ನಿರ್ಮಾಣವಾಗಿರೋ ಶಾಂತಿನಿಕೇತನ ಲೇಔಟ್ ನಲ್ಲಿ 10 ಮೀಟರ್ ರಾಜಕಾಲುವೆ ಇದೆ.ಇದರಲ್ಲಿ 8 ಮೀಟರ್ ನಷ್ಟು ಒತ್ತುವರಿಯಾಗಿದೆ.ಒಟ್ಟು 7 ಕಟ್ಟಡಗಳು ಇವೆ.ಶಾಂತಿನಿಕೇತನ ಲೇಔಟ್, ಮತ್ತು ಪಾಪರೆಡ್ಡಿ ಲೇಔಟ್ ಒತ್ತುವರಿಯಾಗಿದೆ.
ಒತ್ತುವರಿ ಮನೆಗಳನ್ನ ಡ್ಯಾಮೇಜ್ ಮಾಡಿ ಪಾಲಿಕೆ ಅಧಿಕಾರಿಗಳು ಬಿಡುತ್ತಿದ್ದಾರೆ.ವಾಸಕ್ಕೆ ಯೋಗ್ಯವಿಲ್ಲದಂತೆ ಅಧಿಕಾರಿಗಳು ಮಾಡ್ತಿದ್ದಾರೆ.ಮನೆಯೊಳಗಿನ ವಸ್ತುಗಳನ್ನು ತೆರವು ಮಾಡಲು ಸಮಯಾವಕಾಶ ನೀಡಿದ ಅವಧಿಯನ್ನ ಅಧಿಕಾರಿಗಳು ಕೊಟ್ಟಿದ್ರು. ಆದ್ರೆ ಈಗ ಪ್ರಾಪರ್ಟಿ ತೆರವಾಗುತ್ತೆ ಅನ್ನೋ ಸೂಚ್ಯವಾಗಿ ಮಾಲೀಕರು ಬಿಬಿಎಂಪಿಗೆ ತಿಳಿಸಿದ್ದಾರೆ.