Select Your Language

Notifications

webdunia
webdunia
webdunia
webdunia

ಬಿಬಿಎಂಪಿ ಜಂಟಿ ಆಯುಕ್ತ ಶ್ರೀನಿವಾಸ್ ಮೇಲೆ ರೇಡ್

Raid on BBMP Joint Commissioner Srinivas
bangalore , ಸೋಮವಾರ, 12 ಸೆಪ್ಟಂಬರ್ 2022 (21:30 IST)
ಲೋಕಾಯುಕ್ತ ಮರುಸ್ಥಾಪನೆಯಾದ ಬೆನ್ನಲ್ಲೇ ಲೋಕಾಯುಕ್ತದ ಘರ್ಜನೆ ಆರಂಭವಾಗಿದೆ.ಬಿಬಿಎಂಪಿ ಪಶ್ಚಿಮ ಜಂಟಿ ಆಯುಕ್ತ ಶ್ರೀನಿವಾಸ್ ಕಚೇರಿ ಮೇಲೆ ರೇಡ್ ಮಾಡಿದೆ. ಶ್ರೀನಿವಾಸ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
 
ADGP ಪ್ರಶಾಂತ್ ಕುಮಾರ್ ಠಾಕೂರ್, ಬೆಂಗಳೂರು ಲೋಕಾಯುಕ್ತ ಎಸ್ ಪಿ ಶ್ರೀನಾಥ್ ಜೋಶಿ ನೇತೃತ್ವದಲ್ಲಿ ಮೊದಲ ಲೋಕಾಯುಕ್ತ ದಾಳಿ ನಡೆದಿದೆ.ಮಂತ್ರಿಮಾಲ್ ಎದುರಿರುವ ಮಲ್ಲೇಶ್ವರಂ ನ ಬಿಬಿಎಂಪಿ ಕಚೇರಿ ಮೇಲೆ ರೇಡ್ ಮಾಡಲಾಗಿದೆ
 
4 ಲಕ್ಷ ರೂ. ಲಂಚ ಸ್ವೀಕರಿಸುವ ವೇಳೆ ಶ್ರೀನಿವಾಸ್ ರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.ಖಾತೆ ಬದಲಾವಣೆ ವಿಚಾರವಾಗಿ ಶ್ರೀನಿವಾಸ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.ಇಂದು ಮಧ್ಯಾಹ್ನ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ಧಾರೆ.ದಾಳಿ ನಡೆಸಿದ ವೇಳೆ ಶ್ರೀನಿವಾಸ್ ಅವರ ಪಿಎ ಉಮೇಶ್ ಅವರು ಹಣದ ಸಮೇತ ನಿಂತಿದ್ದರು.ಲೋಕಾಯುಕ್ತ ಅಧಿಕಾರಿಗಳು ಶ್ರೀನಿವಾಸ್ ಹಾಗೂ ಅವರ ಪಿಎ ಅನ್ನು ವಿಚಾರಣೆಗೆ ಒಳಪಡಿಸಿದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕಟ್ಟಡ ಕುಸಿತ