Select Your Language

Notifications

webdunia
webdunia
webdunia
webdunia

ಸಹೋದರನ ದಾಖಲೆಗಳನ್ನು ಪಡೆಯಲು ಶಾಲೆಗೆ ಬಂದ ಯುವತಿಗೆ ಆಗಿದ್ದೇನು?

ಸಹೋದರನ ದಾಖಲೆಗಳನ್ನು ಪಡೆಯಲು ಶಾಲೆಗೆ ಬಂದ ಯುವತಿಗೆ ಆಗಿದ್ದೇನು?
ನೊಯ್ಡಾ , ಬುಧವಾರ, 9 ಸೆಪ್ಟಂಬರ್ 2020 (08:26 IST)
ನೊಯ್ಡಾ : ಸಹೋದರನ ವರ್ಗಾವಣೆ ಪ್ರಮಾಣ ಪತ್ರವನ್ನು ಪಡೆಯಲು ಶಾಲೆಗೆ ಬಂದ 20 ವರ್ಷದ ಯುವತಿಯ ಮೇಲೆ ಶಾಲೆಯ ಅಧ್ಯಕ್ಷರು ಮಾನಭಂಗ ಎಸಗಿದ ಘಟನೆ ಇಕೋಟೆಕ್ 3 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಆರೋಪಿಯನ್ನು ನಿರಜ್ ಭತಿ ಎಂದು ಗುರುತಿಸಲಾಗಿದೆ. ಲಾಕ್ ಡೌನ್ ಇದ್ದ ಕಾರಣ ಹಣದ ಅಭಾವದಿಂದ ಸಹೋದರನ ಶಾಲಾ ಶುಲ್ಕ ಪಾವತಿಸಲು ಸಂತ್ರಸ್ತೆಯ ಪೋಷಕರಿಗೆ ಸಾಧ್ಯವಾಗಲಿಲ್ಲ. ಆದಕಾರಣ ಆತನನ್ನು ಶಾಲೆಯಿಂದ ಹೊರಹಾಕಲಾಗಿತ್ತು. ಈ ಹಿನ್ನಲೆಯಲ್ಲಿ ಆತನ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಲು ಸಂತ್ರಸ್ತೆ ಶಾಲೆಗೆ ಹೋಗಿದ್ದಳು. ಆ ವೇಳೆ  ಶಾಲೆಯ ಅಧ್ಯಕ್ಷರು ಇಂತಹ ಕೃತ್ಯ ಎಸಗಿದ್ದಾನೆ.

ಯುವತಿ ಮನೆಯಲ್ಲಿ ಯಾರಿಗೂ ಈ ವಿಚಾರ ತಿಳಿಸಿರಲಿಲ್ಲ. ಆದರೆ ಕೊನೆಗೆ ಮನೆಯವರು ಈ ವಿಚಾರ ತಿಳಿದು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಶ್ರಮಕ್ಕೆ ನುಗ್ಗಿದ ಪುರುಷರಿಂದ ಸಾಧ್ವಿಯ ಮಾನಭಂಗ