ಹೈದರಾಬಾದ್ : ತಮ್ಮ ನೆಚ್ಚಿನ ನಟ ಮುಂಚೂಣಿಯಲ್ಲಿರಬೇಕೆಂದು ಅಭಿಮಾನಿಗಳು ಹಾರೈಸುವ ಕಾರಣ   ಸಿನಿಮಾರಂಗಗಳಲ್ಲಿ ಸ್ಟಾರ್ ನಟರ ಅಭಿಮಾನಿಗಳ ಪೈಪೋಟಿ ಜೋರಾಗಿಯೇ ನಡೆಯುತ್ತಿರುತ್ತದೆ. ಅದೇರೀತಿ ಇದೀಗ ಮಹೇಶ್ ಬಾಬು ಹಾಗೂ ಪವನ್ ಕಲ್ಯಾಣ್ ಅಭಿಮಾನಿಗಳ ಜೊತೆ ಈ ಪೈಪೋಟಿ ಶುರುವಾಗಿದೆ.
									
										
								
																	
ಹೌದು. ಅದೇನೆಂದರೆ ಈ ಹಿಂದೆ ಮಹೇಶ್ ಬಾಬು ಹುಟ್ಟುಹಬ್ಬದಂದು ಅಭಿಮಾನಿಗಳು ಟ್ವೀಟರ್ ನಲ್ಲಿ ಮಹೇಶ್ ಬಾಬು ಹ್ಯಾಶ್ ಟ್ಯಾಗ್ ವಿಶ್ ಮಾಡುವ ಮೂಲಕ ಬಳಸಿ 24 ಗಂಟೆಯಲ್ಲಿ 60.2 ಮಿಲಿಯನ್ ಟ್ವೀಟ್ ಮಾಡಿ ದಾಖಲೆ ನಿರ್ಮಿಸಿದ್ದರು.
									
			
			 
 			
 
 			
			                     
							
							
			        							
								
																	ಇದೀಗ ಇಂದು (ಸೆಪ್ಟೆಂಬರ್2) ಪವನ್ ಕಲ್ಯಾಣ ಹುಟ್ಟುಹಬ್ಬದ ಹಿನ್ನಲೆಯಲ್ಲಿ ತಮ್ಮ ನೆಚ್ಚಿನ ನಟನಿಗೆ ಹ್ಯಾಶ್ ಟ್ಯಾಗ್ ಬಳಸಿ ವಿಶ್ ಮಾಡುವ ಮೂಲಕ ಮಹೇಶ್ ಬಾಬು ಅಭಿಮಾನಿಗಳ ದಾಖಲೆ ಮುರಿಯಲು ಪವನ್ ಕಲ್ಯಾಣ್ ಅಭಿಮಾನಿಗಳು ಸಜ್ಜಾಗಿದ್ದಾರೆ ಎನ್ನಲಾಗಿದೆ. ಆ ಮೂಲಕ ಪವನ್ ಕಲ್ಯಾಣ್ ಅಭಿಮಾನಿಗಳು ಮಹೇಶ್ ಬಾಬು ಅಭಿಮಾನಿಗಳ ದಾಖಲೆ ಮುರಿಯುತ್ತಾರಾ? ಎಂಬುದನ್ನು ಕಾದುನೋಡಬೇಕಿದೆ.