ಹೈದರಾಬಾದ್ : ತೆಲುಗಿನ ಖ್ಯಾತ ನಿರೂಪಕ, ನಟ ಪ್ರದೀಪ್ ಮಾಚಿರಾಜು ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದ್ದು, ಈ ಹಿನ್ನಲೆಯಲ್ಲಿ ಯೂಟ್ಯೂಬ್ ವಾಹಿನಿ ಮತ್ತು ವೆಬ್ ಸೈಟ್ ಗಳ ವಿರುದ್ಧ ಪ್ರದೀಪ್ ಗರಂ ಆಗಿದ್ದಾರೆ.
ಹೈದರಾಬಾದಿನ ಪಂಜಗುಟ್ಟಾ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬಳು 140 ಜನರ ವಿರುದ್ಧ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದಾಳೆ. ಅದರಲ್ಲಿ ಪ್ರದೀಪ್ ಮಾಚಿರಾಜು ಹೆಸರು ಕೂಡ ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ಈ ವಿಚಾರವನ್ನು ಯೂಟ್ಯೂಬ್ ವಾಹಿನಿ ಮತ್ತು ವೆಬ್ ಸೈಟ್ ಗಳು ವರದಿ ಮಾಡಿದೆ.
ಈ ಬಗ್ಗೆ ಗರಂ ಆದ ಪ್ರದೀಪ್ , ಇದು ಆಧಾರರಹಿತ ಆರೋಪ , ಯೂಟ್ಯೂಬ್ ವಾಹಿನಿ ಹಾಗೂ ಕೆಲವು ವೆಬ್ ಸೈಟ್ ಗಳು ನನ್ನ ಹೆಸರನ್ನು ಸುಮ್ಮನೆ ಉಲ್ಲೇಖಿಸುತ್ತಿದ್ದಾರೆ. ನನ್ನ ಪೋಟೊಗಳನ್ನು ಬಳಸುತ್ತಿದ್ದಾರೆ. ಇಂತವರ ವಿರುದ್ಧ ನಾನು ಕಾನೂನು ಕ್ರಮ ಜರುಗಿಸುತ್ತೇನೆ ಎಂದು ಕಿಡಿಕಾರಿದ್ದಾರೆ ಎನ್ನಲಾಗಿದೆ.