Select Your Language

Notifications

webdunia
webdunia
webdunia
webdunia

ಟಿಆರ್ ಪಿಯಲ್ಲಿ ಮೊದಲ ಸ್ಥಾನದಲ್ಲಿದೆ ಅಲ್ಲು ಅರ್ಜುನ್ ಅಭಿನಯದ ಈ ಸಿನಿಮಾ

ಟಿಆರ್ ಪಿಯಲ್ಲಿ ಮೊದಲ ಸ್ಥಾನದಲ್ಲಿದೆ ಅಲ್ಲು ಅರ್ಜುನ್ ಅಭಿನಯದ ಈ ಸಿನಿಮಾ
ಹೈದರಾಬಾದ್ , ಸೋಮವಾರ, 31 ಆಗಸ್ಟ್ 2020 (13:09 IST)
ಹೈದರಾಬಾದ್ :  ಟಾಲಿವುಡ್ ನ ಸ್ಟಾರ್ ನಟ ಅಲ್ಲು ಅರ್ಜುನ್ ಸಿನಿಮಾವೊಂದು ಟಿಆರ್ ಪಿಯಲ್ಲಿ  ಟಾಲಿವುಡ್ ನ ಸ್ಟಾರ್ ನಟರಾದ ಮಹೇಶ್ ಬಾಬು ಹಾಗೂ  ಪ್ರಭಾಸ್ ಅವರನ್ನು ಹಿಂದಿಕ್ಕಿ ದಾಖಲೆ ನಿರ್ಮಿಸಿದೆ.

ಹೌದು. ಅಲ್ಲು ಅರ್ಜುನ್ ಅಭಿನಯದ ‘ಅಲಾ ವೈಕುಂಠಪುರಂಲೋ’ ಸಿನಿಮಾ ಈ ಹಿಂದೆ ರಿಲೀಸ್ ಆದ ವೇಳೆ ಭರ್ಜರಿ ಕಲೆಕ್ಷನ್ ಮಾಡಿ ಸೂಪರ್ ಹಿಟ್ ಸಿನಿಮಾ ಎಂದುಕೊಂಡಿತ್ತು. ಆದರೆ ಇತ್ತೀಚೆಗೆ ಟಿವಿಯಲ್ಲಿ ಪ್ರಸಾರವಾಗಿದ್ದ ‘ಅಲಾ ವೈಕುಂಠಪುರಂಲೋ’ ಸಿನಿಮಾ ಟಿಆರ್ ಪಿಯಲ್ಲಿ  ದಾಖಲೆ ನಿರ್ಮಿಸಿದೆ.

ಈ ಹಿಂದೆ ಮಹೇಶ್ ಬಾಬು ಅಭಿನಯದ ‘ಸರಿಲೇರು ನೀಕೆವ್ವರು’ ಹಾಗೂ ಪ್ರಭಾಸ್ ‘ಬಾಹುಬಲಿ’ ಸಿನಿಮಾ ಟಿಆರ್ ಪಿಯಲ್ಲಿ  ದಾಖಲೆ ನಿರ್ಮಿಸಿತ್ತು. ಆದರೆ ಇದೀಗ ಅಲ್ಲು ಅರ್ಜುನ್ ಅಭಿನಯದ ‘ಅಲಾ ವೈಕುಂಠಪುರಂಲೋ’ ಸಿನಿಮಾ ಟಿಆರ್ ಪಿಯಲ್ಲಿ ಈ ಇಬ್ಬರು ನಟರ ಸಿನಿಮಾವನ್ನು ಹಿಂದಿಕ್ಕಿ ಮೊದಲ ಸ್ಥಾನದಲ್ಲಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಭಾಸ್ ‘ಆದಿಪುರುಷ’ ಸಿನಿಮಾದಲ್ಲಿ ನಾಯಕಿ ಯಾರು ಗೊತ್ತಾ?