Publish Date: Wed, 02 Sep 2020 (11:51 IST)
Updated Date: Wed, 02 Sep 2020 (12:04 IST)
ಬೆಂಗಳೂರು: ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಹಳೆಯ ಸಿನಿಮಾವೊಂದರ ವಿಚಾರವಾಗಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
2013 ರಲ್ಲಿ ತೆರೆ ಕಂಡಿದ್ದ ರಾಧಿಕಾ ನಿರ್ಮಿಸಿ, ನಟಿಸಿದ್ದ ‘ಸ್ವೀಟಿ ನನ್ನ ಜೋಡಿ’ ಸಿನಿಮಾವನ್ನು ಯಾರೋ ಕಿಡಿಗೇಡಿಗಳು ಅವರ ಅನುಮತಿಯಿಲ್ಲದೇ ಯೂ ಟ್ಯೂಬ್ ಗೆ ಅಪ್ ಲೋಡ್ ಮಾಡಿದ್ದಾರೆ. ಹೀಗಾಗಿ ನನ್ನ ಸಿನಿಮಾವನ್ನು ನನ್ನ ಅನುಮತಿಯಿಲ್ಲದೇ ಪೈರಸಿ ಮಾಡಲಾಗಿದೆ. ಈ ರೀತಿ ಪೈರಸಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ರಾಧಿಕಾ ದೂರಿನಲ್ಲಿ ತಿಳಿಸಿದ್ದಾರೆ.