ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ನಂಟಿದೆ ಎಂಬ ವಿಚಾರ ಇಡೀ ಚಿತ್ರರಂಗವನ್ನೇ ತಲೆತಗ್ಗಿಸುವಂತೆ ಮಾಡಿದೆ. ಹೀಗಾಗಿ ಫಿಲಂ ಚೇಂಬರ್ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ.
ಈ ಬಗ್ಗೆ ಇಂದು ಫಿಲಂ ಚೇಂಬರ್ ನಲ್ಲಿ ಸಭೆ ನಡೆಯಲಿದೆ. ಒಂದು ವೇಳೆ ಪೊಲೀಸ್ ತನಿಖೆಯಲ್ಲಿ ಯಾವುದೇ ನಟ-ನಟಿಯರ ವಿರುದ್ಧ ತಪ್ಪು ಸಾಬೀತಾದರೆ ಅಂತಹವರ ವಿರುದ್ಧ ನಿರ್ದ್ಯಾಕ್ಷಿಣ್ಯವಾಗಿ ಕ್ರಮ ಕೈಗೊಳ‍್ಳುವುದಾಗಿ ಫಿಲಂ ಚೇಂಬರ್ ಹೇಳಿದೆ. ಹೀಗಾಗಿ ಇಂದು ನಡೆಯಲಿರುವ ಸಭೆಗೆ ಮಹತ್ವ ಬಂದಿದೆ. ಯಾರೋ ಕೆಲವರಿಂದಾಗಿ ಇಡೀ ಚಿತ್ರರಂಗ ತಲೆತಗ್ಗಿಸುವಂತಾಗಿದೆ. ಎಲ್ಲರನ್ನೂ ತಪ್ಪಿತಸ್ಥರಂತೆ ನೋಡಲು ಆಗಲ್ಲ. ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವುದು ಖಚಿತ ಎಂದು ಫಿಲಂ ಚೇಂಬರ್ ಹೇಳಿದೆ.