Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ಬರ್ತ್ ಡೇಗೆ ಅಭಿಮಾನಿಗಳೇ ಮಾಡಿದ ವಿಡಿಯೋ ಸಾಂಗ್

ಕಿಚ್ಚ ಸುದೀಪ್ ಬರ್ತ್ ಡೇಗೆ ಅಭಿಮಾನಿಗಳೇ ಮಾಡಿದ ವಿಡಿಯೋ ಸಾಂಗ್
ಬೆಂಗಳೂರು , ಬುಧವಾರ, 2 ಸೆಪ್ಟಂಬರ್ 2020 (09:31 IST)
ಬೆಂಗಳೂರು: ಸ್ಯಾಂಡಲ್ ವುಡ್ ಬಾದ್ ಶಹಾ ಕಿಚ್ಚ ಸುದೀಪ್ ಇಂದು 47 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರ ಜನ್ಮದಿನವನ್ನು ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ.


ಈ ಬಾರಿ ಕೊರೋನಾದಿಂದಾಗಿ ಬರ್ತ್ ಡೇ ಆಚರಿಸಿಕೊಳ‍್ಳಲ್ಲ ಎಂದು ಸುದೀಪ್ ಹೇಳಿದ್ದರು. ಹೀಗಾಗಿ ಅಭಿಮಾನಿಗಳು ಸಂಭ್ರಮಾಚರಣೆಯನ್ನು ಸೋಷಿಯಲ್ ಮೀಡಿಯಾಗೆ ಸೀಮಿತಗೊಳಿಸಿದ್ದಾರೆ. ಕಿಚ್ಚನಿಗಾಗಿ ಅಭಿಮಾನಿಗಳೇ ವಿಡಿಯೋ ಹಾಡೊಂದನ್ನು ನಿರ್ಮಿಸುತ್ತಿದ್ದು, ನಿರ್ದೇಶಕ ಅನೂಪ್ ಭಂಡಾರಿ ಈ ಹಾಡನ್ನು ಲಾಂಚ್ ಮಾಡಿದ್ದಾರೆ. ಇನ್ನು, ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾದ ಟೀಸರ್ ಕೂಡಾ ಬಿಡುಗಡೆಯಾಗಲಿದೆ.

ಕಿಚ್ಚ ಸುದೀಪ್ ಬರ್ತ್ ಡೇಗೆ ಅಭಿಮಾನಿಗಳಲ್ಲದೆ, ಚಿತ್ರರಂಗದ ಗಣ್ಯರೂ ಶುಭ ಹಾರೈಸಿದ್ದಾರೆ. ರಕ್ಷಿತಾ ಪ್ರೇಮ್, ಪ್ರೇಮ್, ಪ್ರಿಯಾಂಕ ಉಪೇಂದ್ರ, ಡ್ಯಾನಿಶ್ ಸೇಠ‍್, ಅರ್ಜುನ್ ಜನ್ಯಾ, ಗೋಲ್ಡನ್ ಸ್ಟಾರ್ ಗಣೇಶ್, ನವರಸನಾಯಕ ಜಗ್ಗೇಶ್, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸೇರಿದಂತೆ ಅನೇಕರು ಸಾಮಾಜಿಕ ಜಾಲತಾಣಗಳ ಮೂಲಕ ಶುಭ ಕೋರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಟ ಸುಶಾಂತ್ ಸಿಂಗ್ ಮನೆಮಂದಿ ವಿರುದ್ಧ ಕೇಸ್ ಹಾಕಿದ ರಿಯಾ ಚಕ್ರವರ್ತಿ