Select Your Language

Notifications

webdunia
webdunia
webdunia
webdunia

ಬಾಲಿವುಡ್ ನಟ ಸುಶಾಂತ್ ಸಿಂಗ್ ಮನೆಮಂದಿ ವಿರುದ್ಧ ಕೇಸ್ ಹಾಕಿದ ರಿಯಾ ಚಕ್ರವರ್ತಿ

ಬಾಲಿವುಡ್ ನಟ ಸುಶಾಂತ್ ಸಿಂಗ್ ಮನೆಮಂದಿ ವಿರುದ್ಧ ಕೇಸ್  ಹಾಕಿದ ರಿಯಾ ಚಕ್ರವರ್ತಿ
ಮುಂಬೈ , ಮಂಗಳವಾರ, 1 ಸೆಪ್ಟಂಬರ್ 2020 (22:14 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ರ ಗೆಳತಿ ರಿಯಾ ಚಕ್ರವರ್ತಿ ಇದೀಗ ನಟ ಸುಶಾಂತ್ ಕುಟುಂಬದವರ ವಿರುದ್ಧ ಕೇಸ್ ಹಾಕೋದಕ್ಕೆ ಮುಂದಾಗಿದ್ದಾಳೆ.

ನಟಿ ರಿಯಾ ಚಕ್ರವರ್ತಿ ಎಸ್‌ಎಸ್‌ಆರ್ ಕುಟುಂಬದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಿಕ್ಕೆ ಮುಂದಾಗಿದ್ದಾಳೆ.

ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನು ಪ್ರಸ್ತುತ ಕೇಂದ್ರ ತನಿಖಾ ದಳವು ತನಿಖೆ ನಡೆಸುತ್ತಿದೆ. ಎಸ್‌ಎಸ್‌ಆರ್‌ನ ಗೆಳತಿ ರಿಯಾ ಚಕ್ರವರ್ತಿ, ಅವರ ಕುಟುಂಬ ಸದಸ್ಯರು ಮತ್ತು ಇತರರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಅಲ್ಲದೆ, ಈ ಪ್ರಕರಣದಲ್ಲಿ ರಿಯಾ ವಿರುದ್ಧದ ಹಣ ವರ್ಗಾವಣೆ ಆರೋಪವನ್ನು ಜಾರಿ ನಿರ್ದೇಶನಾಲಯ ಪರಿಶೀಲಿಸುತ್ತಿದೆ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಕೂಡ ತನಿಖೆ ಶುರುಮಾಡಿದೆ.

ಈ ಪ್ರಕರಣದಲ್ಲಿ ಪ್ರಧಾನ ಆರೋಪಿ ಆಗಿರುವ ನಟಿ ರಿಯಾ ಚಕ್ರವರ್ತಿ ತನ್ನ ಪ್ರತಿಷ್ಠೆಗೆ ಧಕ್ಕೆ ತಂದ ಎಸ್‌ಎಸ್‌ಆರ್ ಕುಟುಂಬದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಜ್ಜಾಗಿದ್ದಾರೆ ಎನ್ನಲಾಗಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಟರಿಗೆ ಡ್ರಗ್ ಪೂರೈಕೆ ಮಾಡುತ್ತಿರೋರು ಯಾರು ಗೊತ್ತಾ?