Select Your Language

Notifications

webdunia
webdunia
webdunia
webdunia

ಗೆಳೆಯ ಪ್ರಮೋದ್ ಗಾಗಿ ವಿಶಿಷ್ಟ ಸಿನಿಮಾ ಮಾಡಲಿದ್ದಾರೆ ರಿಷಬ್ ಶೆಟ್ಟಿ

ಗೆಳೆಯ ಪ್ರಮೋದ್ ಗಾಗಿ ವಿಶಿಷ್ಟ ಸಿನಿಮಾ ಮಾಡಲಿದ್ದಾರೆ ರಿಷಬ್ ಶೆಟ್ಟಿ
ಬೆಂಗಳೂರು , ಮಂಗಳವಾರ, 1 ಸೆಪ್ಟಂಬರ್ 2020 (11:10 IST)
ಬೆಂಗಳೂರು: ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಟ ಪ್ರಮೋದ್ ಶೆಟ್ಟಿ ಸಂಪೂರ್ಣ ನಾಯಕರಾಗಿ ಅಭಿನಯಿಸಲಿರುವ ಚಿತ್ರ ‘ಲಾಫಿಂಗ್ ಬುದ್ಧ’. ಈ ಸಿನಿಮಾವನ್ನು ಅವರ ಗೆಳೆಯ ರಿಷಬ್ ಶೆಟ್ಟಿ ನಿರ್ಮಿಸಲಿದ್ದಾರೆ.


ಪ್ರಮೋದ್ ಇದುವರೆಗೆ ಹಲವು ರೀತಿಯ ಪಾತ್ರ ಮಾಡಿದ್ದಾರೆ. ಆದರೆ ಈ ಸಿನಿಮಾದ ಫಸ್ಟ್ ಲುಕ್ ನೋಡಿದರೆ ಅವರು ಎಂಥಾ ಡಿಫರೆಂಟ್ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಲಾಫಿಂಗ್ ಬುದ್ಧನ ರೀತಿ ವಿಪರೀತ ದೇಹ ಬೆಳೆಸಿಕೊಂಡು ಪೊಲೀಸ್ ಅಧಿಕಾರಿಯ ದಿರಿಸಿನಲ್ಲಿರುವ ಪ್ರಮೋದ್ ಲುಕ್ ಗಮನ ಸೆಳೆಯುವಂತಿದೆ. ಸದ್ಯದಲ್ಲೇ ಈ ಸಿನಿಮಾದ ಶೂಟಿಂಗ್ ಪ್ರಾರಂಭವಾಗಲಿದೆ. ರಿಷಬ್ ನಿರ್ಮಾಣದ ಸಿನಿಮಾವನ್ನು ಎಂ. ಭರತ್ ರಾಜು ನಿರ್ದೇಶಿಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಶಾಂತ್ ನೀಲ್ ಸಿನಿಮಾದಲ್ಲಿ ಜೂ.ಎನ್ ಟಿಆರ್ ನಟಿಸುವುದು ಡೌಟ್?