Select Your Language

Notifications

webdunia
webdunia
webdunia
webdunia

ಪ್ರಶಾಂತ್ ನೀಲ್ ಸಿನಿಮಾದಲ್ಲಿ ಜೂ.ಎನ್ ಟಿಆರ್ ನಟಿಸುವುದು ಡೌಟ್?

ಪ್ರಶಾಂತ್ ನೀಲ್ ಸಿನಿಮಾದಲ್ಲಿ ಜೂ.ಎನ್ ಟಿಆರ್ ನಟಿಸುವುದು ಡೌಟ್?
ಹೈದರಾಬಾದ್ , ಮಂಗಳವಾರ, 1 ಸೆಪ್ಟಂಬರ್ 2020 (11:02 IST)
ಹೈದರಾಬಾದ್ : ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ 2 ಚಿತ್ರದ ಬಳಿಕ ಖ್ಯಾತ ನಟ ಜೂ.ಎನ್ ಟಿಆರ್ ಜೊತೆಗೆ ಸಿನಿಮಾ ಮಾಡಲು ಮುಂದಾಗಿದ್ದು. ಆದರೆ ಇದೀಗ ಅದಕ್ಕೆ ವಿಘ್ನವೊಂದು ಎದುರಾಗಿದೆ.

ಹೌದು. ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ನಟ ಜೂ.ಎನ್ ಟಿಆರ್ ಸಿನಿಮಾ ಈಗಾಗಲೇ ಘೋಷಣೆಯಾಗಿದ್ದು, ಈ ವರ್ಷದ ಕೊನೆಯಲ್ಲಿ ಸಿನಿಮಾ ಸೆಟ್ಟೇರಲಿದೆ ಎನ್ನಲಾಗಿದೆ. ಆದರೆ ನಿರ್ದೇಶಕ ರಾಜಮೌಳಿಯ ಆರ್ ಆರ್ ಆರ್ ಸಿನಿಮಾ ಈಗ ಈ ಸಿನಿಮಾಕ್ಕೆ ತಡೆಯಾಗಿ ನಿಂತಿದೆ.

ನಿರ್ದೇಶಕ ರಾಜಮೌಳಿಯ ಆರ್ ಆರ್ ಆರ್ ಸಿನಿಮಾ ಕೊರೊನಾ ಹಿನ್ನಲೆಯಲ್ಲಿ ಹಾಗೂ  ಈ ಸಿನಿಮಾದಲ್ಲಿ ಜೂ.ಎನ್ ಟಿಆರ್ ಸೇರಿದಂತೆ ಹಲವು ಸ್ಟಾರ್ ನಟರಿರುವ ಕಾರಣ ಅವರ ಡೇಟ್ಸ್ ಪರಸ್ಪರ ಹೊಂದಾಣಿಕೆ ಆಗುತ್ತಿಲ್ಲವಾದ್ದರಿಂದ ಸ್ಥಗಿತಗೊಂಡಿದೆ. ಅಲ್ಲದೇ ಈ ಸಿನಿಮಾದ ಬಳಿಕ ಜೂ.ಎನ್ ಟಿಆರ್ ತ್ರಿವಿಕ್ರಮ್ ಸಿನಿಮಾಕ್ಕೆ ಸಹಿ ಮಾಡಿದ್ದಾರೆ. ಹಾಗಾಗಿ ಜೂ.ಎನ್ ಟಿಆರ್ ಪ್ರಶಾಂತ್ ನೀಲ್ ಸಿನಿಮಾದಲ್ಲಿ ನಟಿಸುವುದು ಡೌಟ್ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಸೋಂಕಿಗೆ ಒಳಗಾಗಿದ್ದ ನಟಿ ಜೆನಿಲಿಯಾ 3 ವಾರಗಳ ಬಳಿಕ ವಿಚಾರ ತಿಳಿಸಿದ್ದೇಕೆ?