Publish Date: Mon, 16 Nov 2020 (06:54 IST)
Updated Date: Mon, 16 Nov 2020 (06:56 IST)
ಪಟಿಯಾಲ : ಸಹೋದರಿಯ ಜೊತೆ ಪ್ರೇಮಸಂಬಂಧ ಹೊಂದಿದ್ದಾನೆಂದು ಶಂಕಿಸಿ 22 ವರ್ಷದ ಯುವಕನನ್ನು ನೆರೆಮನೆಯಾತ ಕೊಲೆ ಮಾಡಿದ ಘಟನೆ ಪಂಜಾಬ್ ನ ಪಟಿಯಾಲದಲ್ಲಿ ನಡೆದಿದೆ.
ಮೃತ ಯುವಕ ಅಲಂಕಾರಿಕ ವಸ್ತುಗಳನ್ನು ಖರೀದಿಸಲು ಮಾರುಕಟ್ಟೆಗೆ ಹೋಗುತ್ತಿದ್ದಾಗ ದಾರಿಗೆ ಅಡ್ಡಬಂದ ನೆರೆಮನೆಯಾತ ಹರಿತವಾದ ಆಯುಧದಿಂದ ಯುವಕನಿಗೆ ಹಲವು ಬಾರಿ ಇರಿದಿದ್ದಾನೆ. ಯುವಕನನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಆತ ಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಈ ಬಗ್ಗೆ ಮೃತ ಯುವಕನ ತಂದೆ ಸದರ್ ನಭಾ ಪೊಲೀಸರಿಗೆ ಆರೋಪಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.