Publish Date: Fri, 18 Sep 2020 (10:10 IST)
Updated Date: Fri, 18 Sep 2020 (12:31 IST)
ಪಟಿಯಾಲ : ಸಿಹಿತಿಂಡಿ ಕೊಡಿಸುವ ಆಮಿಷಯೊಡ್ಡಿ 7 ವರ್ಷದ ಬಾಲಕಿಯ ಮೇಲೆ 30 ವರ್ಷದ ವ್ಯಕ್ತಿಯೊಬ್ಬ ಮಾನಭಂಗ ಎಸಗಿದ ಘಟನೆ ಪಂಜಾಬ್ ನ ಪಟಿಯಾಲ ಜಿಲ್ಲೆಯಲ್ಲಿ ನಡೆದಿದೆ.
ಸಂತ್ರಸ್ತ ಬಾಲಕಿಯ ನೆರೆಮನೆಯವನಾದ ಆರೋಪಿ ಬಾಲಕಿಗೆ ಸಿಹಿತಿಂಡಿ ಕೊಡಿಸುವೆ ಎಂದು ತನ್ನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಾಲಕಿಯ ತಾಯಿ ಮಗಳು ಕಾಣಿಸದಿದ್ದಾಗ ಹುಡುಕಿಕೊಂಡು ನೆರೆಮನೆಯವನ ಮನೆಗೆ ಹೋದಾಗ ವಿಚಾರ ತಿಳಿದುಬಂದಿದೆ.
ಸಂತ್ರಸ್ತೆಯ ತಾಯಿ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.