Publish Date: Fri, 18 Sep 2020 (07:53 IST)
Updated Date: Fri, 18 Sep 2020 (07:55 IST)
ಅಹಮದಾಬಾದ್ : ಗುಜರಾತ್ ನ ಅಹಮದಾಬಾದ್ ನಲ್ಲಿ 7 ವರ್ಷದ ಬಾಲಕಿಯನ್ನು ಅಪಹರಿಸಿ ಮಾನಭಂಗ ಎಸಗಿ ಕೊಲೆ ಮಾಡಿದ ಕಾರಣಕ್ಕಾಗಿ 46 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಭಿಖಾ ಮಿಸ್ತಿ ಎಂದು ಗುರುತಿಸಲಾಗಿದ್ದು, ಈತ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಬಾಲಕಿಯ ಮನೆ ಬಳಿ ವಾಸವಾಗಿದ್ದಾನೆ. ಈತ ಬಾಲಕಿಗೆ ಆಮಿಷಯೊಡ್ಡಿ ಆಕೆಯನ್ನು ಆಟೋರಿಕ್ಷಾದಲ್ಲಿ ಹೊಲದ ಬಳಿ ಕರೆದುಕೊಂಡು ಹೋಗಿ ಆಕೆಯ ಮೇಲೆ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ. ಆಗ ಬಾಲಕಿ ಅದನ್ನು ವಿರೋಧಿಸಿದಾಗ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ ಶವವನ್ನು ಪೊದೆಯಲ್ಲಿ ಎಸೆದು ಬಂದಿದ್ದಾನೆ.
ಅಪ್ರಾಪ್ತೆ ನಾಪತ್ತೆಯಾಗಿದ್ದ ಹಿನ್ನಲೆಯಲ್ಲಿ ಆಕೆಯ ಮನೆಯವರು ದೂರು ದಾಖಲಿಸಿದ್ದಾರೆ. ಈ ದೂರಿನ ಮೇರೆಗೆ ಪೊಲೀಸರು ಬಾಲಕಿಯನ್ನು ಹುಡುಕಾಡುತ್ತಿದ್ದಾಗ ಆಕೆಯ ಕೊಳೆತ ದೇಹ ಬಟ್ಟೆಗಳಿಲ್ಲದೇ ಮಂಗಳವಾರ ರಾತ್ರಿ ಒಗ್ನಾಜ್ ಟ್ರೋಲ್ ಪ್ಲಾಜಾ ಬಳಿಯ ಹೊಲವೊಂದರಲ್ಲಿ ನಾಯಿ ಕಚ್ಚಿದ ಗುರುತುಗಳೊಂದಿಗೆ ಪತ್ತೆಯಾಗಿದೆ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ಮಾಡಿದಾಗ ಆತ ಸತ್ಯಾಂಶ ಬಾಯಿಬಿಟ್ಟಿದ್ದಾನೆ. ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.