Publish Date: Tue, 25 Aug 2020 (09:56 IST)
Updated Date: Thu, 03 Sep 2020 (18:06 IST)
ಲಕ್ನೋ: ಮಕ್ಕಳ ಮನಸ್ಸು ತುಂಬಾ ಮುಗ್ಧ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಉತ್ತರ ಪ್ರದೇಶದಲ್ಲಿ ಏಳು ವರ್ಷದ ಮಗುವೊಂದು ತನ್ನ ಸಂಬಂಧಿಕರ ನಾಲ್ಕು ವರ್ಷದ ಮಗುವಿನ ಕುತ್ತಿಗೆ ಸೀಳಿದ ಘಟನೆ ನಡೆದಿದೆ.
ಪೋಷಕರು ಮನೆಯಲ್ಲಿಲ್ಲದ ವೇಳೆ ಇಬ್ಬರೂ ಹುಡುಗರು ಜತೆಯಾಗಿ ಆಟವಾಡಿಕೊಂಡಿದ್ದರು. ಈ ವೇಳೆ ಮನೆಯೊಳಗೆ ಹೋದ ಮಗು ಚಾಕು ತಂದು ಇನ್ನೊಂದು ಮಗುವಿನ ಕುತ್ತಿಗೆಗೆ ಇರಿದಿದೆ. ಇದು ಹುಡುಗಾಟದಿಂದ ಮಾಡಿದ ಕೃತ್ಯವೆಂದು ಪೋಷಕರು ಹೇಳಿಕೆ ನೀಡಿದ್ದಾರೆ. ಗಾಯಗೊಂಡ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.