Publish Date: Mon, 24 Aug 2020 (10:40 IST)
Updated Date: Thu, 03 Sep 2020 (18:12 IST)
ನವದೆಹಲಿ: ಗಂಡ-ಹೆಂಡತಿ, ಲವ್ವರ್ಸ್ ನಡುವೆ ಯಾವುದೇ ಗುಟ್ಟು ಇರಬಾರದು ನಿಜ. ಆದರೆ ಇಲ್ಲಿ ಗರ್ಲ್ ಫ್ರೆಂಡ್ ಫೋನ್ ಪಾಸ್ ವರ್ಡ್ ಕೊಡಲಿಲ್ಲವೆಂದು ಬಾಯ್ ಫ್ರೆಂಡ್ ಆಕೆಯ ಜೀವವನ್ನೇ ತೆಗೆದಿದ್ದಾನೆ!
ಇದು ನಡೆದಿರುವುದು ದೆಹಲಿಯಲ್ಲಿ. 39 ವರ್ಷದ ವ್ಯಕ್ತಿ ಕಳೆದ ಎರಡು ತಿಂಗಳಿನಿಂದ 35 ವರ್ಷದ ಮಹಿಳೆ ಜತೆ ಲಿವಿಂಗ್ ಟುಗೆದರ್ ಸಂಬಂಧ ಹೊಂದಿದ್ದ. ಇಬ್ಬರೂ ಮನೆ ಮಾಡಿಕೊಂಡು ಜತೆಯಾಗಿ ವಾಸ ಮಾಡುತ್ತಿದ್ದರು. ಆದರೆ ಇಬ್ಬರ ನಡುವೆ ಸಂಬಂಧ ಹಳಸಿತ್ತು ಎನ್ನಲಾಗಿದೆ. ಆಕೆಯ ಮೇಲೆ ಸಂಶಯ ಹೊಂದಿದ್ದ ಆರೋಪಿ ಫೋನ್ ಪಾಸ್ ವರ್ಡ್ ನೀಡುವಂತೆ ಕೇಳಿದ್ದ ಆದರೆ ಆಕೆ ಹಂಚಿಕೊಂಡಿರಲಿಲ್ಲ. ಹೀಗಾಗಿ ಆರೋಪಿ ಆಕೆಯನ್ನು ಸುತ್ತಿಗೆಯಿಂದ ಹೊಡೆದು ಜೀವ ತೆಗೆದಿದ್ದಾನೆ. ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.