Publish Date: Sun, 23 Aug 2020 (09:30 IST)
Updated Date: Sun, 23 Aug 2020 (10:20 IST)
ನವದೆಹಲಿ: ಗಂಡನೇ ಹೆಂಡತಿಯನ್ನು, ಹೆಂಡತಿ ಗಂಡನನ್ನು ಅಕ್ರಮ ಸಂಬಂಧಕ್ಕಾಗಿ ಕೊಲೆ ಮಾಡುವುದು ಇತ್ತೀಚೆಗಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಈಗ ರಾಷ್ಟ್ರ ರಾಜಧಾನಿಯಲ್ಲೂ ಅಂತಹದ್ದೇ ಘಟನೆ ನಡೆದಿದೆ.
ಕೃಷ್ಣನ್ ತ್ಯಾಗಿ ಎಂಬ 50 ವರ್ಷದ ವ್ಯಕ್ತಿಯನ್ನು ಆತನ ಪತ್ನಿಯೇ ಪ್ರಿಯಕರನ ಜತೆ ಸೇರಿ ಕೊಲೆ ಮಾಡಿ ಕೊನೆಗೆ ಆತ್ಮಹತ್ಯೆಯ ನಾಟಕವಾಡಿದ್ದಳು. ಆದರೆ ಪೊಲೀಸರು ತನಿಖೆ ನಡೆಸಿ ಆರೋಪಿ ಪತ್ನಿ ಮತ್ತು ಆಕೆಯ ಜತೆಗೆ ಕೊಲೆಗೆ ಸಹಕಾರ ನೀಡಿದ ಪ್ರಿಯಕರ, ಆತನ ಸಂಬಂಧಿಯನ್ನು ಬಂಧಿಸಿದ್ದಾರೆ.
ತನಗಿಂದ 20 ವರ್ಷ ವಯಸ್ಸಿನಲ್ಲಿ ಹಿರಿಯನಾದ ಪತಿಯ ಜತೆ ಬಾಳುವುದು ಆರೋಪಿ ಮಹಿಳೆಗೆ ಇಷ್ಟವಿರಲಿಲ್ಲ. ಅಲ್ಲದೆ, ಆಕೆಗೆ ಆಗಲೇ ಇನ್ನೊಬ್ಬ ಯುವಕನ ಜತೆ ಸ್ನೇಹ ಸಂಬಂಧವಾಗಿತ್ತು. ಹೀಗಾಗಿ ಆಹಾರದಲ್ಲಿ ವಿಷ ಉಣಿಸಿ ಪತಿಯನ್ನು ಕೊಲೆ ಮಾಡಿದ್ದಾಳೆ.
ಈಕೆಯ ಎಲ್ಲಾ ಪ್ರಲಾಪ ಕೇಳಿಸಿಕೊಂಡ ಶರಿಯಾ ಕೋರ್ಟ್ ಮುಖ್ಯಸ್ಥ ವಿಚ್ಛೇದನ ಕೊಡಲಾಗದು ಎಂದಿದ್ದಾರಂತೆ. ಇದರಿಂದ ಮಹಿಳೆ ಗ್ರಾಮದ ಮುಖ್ಯಸ್ಥರ ಬಳಿ ತೆರಳಿದ್ದು ಅವರೂ ಈ ವಿಚಾರದಲ್ಲಿ ತಲೆ ಹಾಕಲು ನಿರಾಕರಿಸಿದ್ದಾರೆ!