Publish Date: Sat, 22 Aug 2020 (17:02 IST)
Updated Date: Sat, 22 Aug 2020 (17:04 IST)
ಮದುವೆಯಾದರೂ ಮಕ್ಕಳಾಗದ ಕಾರಣದಿಂದ ಮಗು ಬೇಕೆಂದು ಆ ಮಂಗಳ ಮುಖಿಯರಿಬ್ಬರು ಹಂಬಲಿಸುತ್ತಿದ್ದರು. ಆದರೆ ಅದೇ ವಿಷಯ ಅವರ ಜೀವನ ತೆಗೆದಿದೆ.
ಮುರುಗನ್ ಎಂಬಾತನನ್ನು ಮಂಗಳಮುಖಿಯರಾದ ಭವಾನಿ, ಅನುಷ್ಕಾ ಮದುವೆಯಾಗಿದ್ದರು.
ಸುಖವಾಗಿಯೇ ಇದ್ದ ಈ ಮೂವರಿಗೆ ಮಗುವಿನ ಆಸೆ ಚಿಗುರೊಡೆದಿದೆ. ಹೀಗಾಗಿ ಮಗು ದತ್ತು ಪಡೆಯೋದಕ್ಕೆ ಮುಂದಾಗಿದ್ದಾರೆ.
ಋಷಿಕೇಸ್ ಎಂಬಾತನಿಗೆ ಮಗು ದತ್ತು ಕೊಡಿಸುವಂತೆ ಕೇಳಿದ್ದು, ಈ ಡೀಲ್ ಗಾಗಿ 5 ಲಕ್ಷ ರೂಪಾಯಿಗಳನ್ನು ನೀಡಿದ್ಧಾರೆ.
ಆದರೆ ಹಣ ಪಡೆದ ಋಷಿಕೇಸ್ ಮಗು ದತ್ತುಕೊಡಿಸದೇ ಪದೇ ಪದೇ ಸತಾಯಿಸಿದ್ದಾನೆ.
ಕೊನೆಗೆ ಇಬ್ಬರು ಮಂಗಳಮುಖಿಯರು ಹಾಗೂ ಮುರುಗನ್ ನನ್ನು ತನ್ನ ಸ್ನೇಹಿತರ ಸಹಾಯದಿಂದ ಋಷಿಕೇಸ್ ಕೊಲೆ ಮಾಡಿದ್ದಾನೆ.
ತಮಿಳುನಾಡಿನಲ್ಲಿ ಘಟನೆ ನಡೆದಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.