Select Your Language

Notifications

webdunia
webdunia
webdunia
webdunia

ಸಂಯುಕ್ತಾ ಹೆಗಡೆ ಮೇಲೆ ಹಲ್ಲೆ ಮಾಡಿದವರ ವಿರುದ್ಧ ದೂರು ದಾಖಲು

ಸಂಯುಕ್ತಾ ಹೆಗಡೆ ಮೇಲೆ ಹಲ್ಲೆ ಮಾಡಿದವರ ವಿರುದ್ಧ ದೂರು ದಾಖಲು
ಬೆಂಗಳೂರು , ಭಾನುವಾರ, 6 ಸೆಪ್ಟಂಬರ್ 2020 (10:48 IST)
ಬೆಂಗಳೂರು: ಪಾರ್ಕ್ ನಲ್ಲಿ ಮಾಡರ್ನ್ ಡ್ರೆಸ್ ನಲ್ಲಿ ವರ್ಕೌಟ್ ಮಾಡುತ್ತಿದ್ದರೆಂಬ ಕಾರಣಕ್ಕೆ ನಟಿ ಸಂಯುಕ್ತಾ ಹೆಗಡೆ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಕ್ತಾರೆ ಕವಿತಾ ರೆಡ್ಡಿ ವಿರುದ್ಧ ಪ್ರಕರಣ ದಾಖಲಾಗಿದೆ.


ಎಚ್ಎಸ್ಆರ್ ಬಡಾವಣೆಯ ಪಾರ್ಕ್ ಒಂದರಲ್ಲಿ ನಿನ್ನೆ ಬೆಳಿಗ್ಗೆ ಈ ಘಟನೆ ನಡೆದಿತ್ತು. ಸ್ಪೋರ್ಟ್ಸ್ ವೇರ್ ನಲ್ಲಿ ವರ್ಕೌಟ್ ಮಾಡುತ್ತಿದ್ದ ನಟಿ ಮೇಲೆ ಕವಿತಾ ರೆಡ್ಡಿ ಡ್ರೆಸ್ ಬಗ್ಗೆ ಪ್ರಶ್ನಿಸಿದ್ದಲ್ಲದೆ, ಹಲ್ಲೆ ಮಾಡಿದ್ದರು. ಅಲ್ಲದೆ ಇದನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದರು. ಈ ಬಗ್ಗೆ ನಟಿ ಸಂಯುಕ್ತಾ ಎಚ್ಎಸ್ ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅದರಂತೆ ಕವಿತಾ ರೆಡ್ಡಿ ಮೇಲೆ ದೂರು ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಗಿಣಿ ಪ್ರಕರಣದಲ್ಲಿ ನಾನೂ ಆರೋಪಿ ಎಂದು ಶರಣಾದ ಯುವಕ