Select Your Language

Notifications

webdunia
webdunia
webdunia
webdunia

ಪಟಾಕಿ ತರಲು ಹೋದ ಹುಡುಗಿಗೆ ರಾತ್ರಿ ಆಗಿದ್ದೇನು?

ಪಟಾಕಿ ತರಲು ಹೋದ ಹುಡುಗಿಗೆ ರಾತ್ರಿ ಆಗಿದ್ದೇನು?
ಕಾನ್ಪುರ , ಸೋಮವಾರ, 16 ನವೆಂಬರ್ 2020 (06:51 IST)
ಕಾನ್ಪುರ : ಕಾನ್ಪುರದ ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ದೇಹದ ಹಲವಾರು ಅಂಗಗಳು ಇರದ 6 ವರ್ಷದ ಬಾಲಕಿಯ  ಶವ ಪತ್ತೆಯಾಗಿದೆ.

ಪಟಾಕಿ ಖರೀದಿಸಲು ಬಾಲಕಿ ರಾತ್ರಿ ಮನೆಯಿಂದ ಹೊರಗೆ ಹೋಗಿದ್ದಾಳೆ. ಆದರೆ ತಡರಾತ್ರಿಯವರೆಗೂ ಬಾಲಕಿ ಹಿಂದಿರುಗದಿದ್ದಾಗ ಮನೆಯವರು ಆಕೆಯನ್ನು ಹುಡುಕಿಕೊಂಡು ಹೋಗಿದ್ದಾರೆ. ಮರುದಿನ ಆಕೆಯ ಶವ ಕಾಳಿ ದೇವಾಲಯದ ಪೊದೆಯಲ್ಲಿ ಕಂಡುಬಂದಿದೆ.

ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದು, ತನ್ನ ಮಗಳನ್ನು ಅತೀಂದ್ರಿಯ ಅಭ್ಯಾಸಕ್ಕಾಗಿ ಬಳಸಲಾಗಿದೆ ಎಂದು ಆರೋಪಿಸಿದ್ದಾರೆ. ಆದರೆ ಪೊಲೀಸರಿಗೆ ಕಾಡು ಪ್ರಾಣಿಗಳಿಂದ  ದಾಳಿ ಒಳಗಾದ ಶಂಕೆ ಕಾಡುತ್ತಿದೆ. ಈಗಾಗಲೇ ಬಾಲಕಿಯ ಶವ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಹಾರಕ್ಕೆ ಮತ್ತೆ ನಿತೀಶ್ ಸಿಎಂ: ಇಂದು ಸಭೆ ಸೇರಲಿರುವ ಎನ್ ಡಿಎ