Select Your Language

Notifications

webdunia
webdunia
webdunia
webdunia

ಸೋದರ ಸೊಸೆಯನ್ನು ಕೊಲೆ ಮಾಡಿ ಬೆಡ್ ಬಾಕ್ಸ್ ನೊಳಗೆ ಶವ ತುಂಬಿಸಿಟ್ಟ ದಂಪತಿ

ಸೋದರ ಸೊಸೆಯನ್ನು ಕೊಲೆ ಮಾಡಿ ಬೆಡ್ ಬಾಕ್ಸ್ ನೊಳಗೆ ಶವ ತುಂಬಿಸಿಟ್ಟ ದಂಪತಿ
ನವದೆಹಲಿ , ಬುಧವಾರ, 4 ನವೆಂಬರ್ 2020 (06:25 IST)
ನವದೆಹಲಿ : 17 ವರ್ಷದ ಸೋದರ ಸೊಸೆಯನ್ನು ಕೊಲೆ ಮಾಡಿದ ದಂಪತಿಗಳು ಬೆಡ್ ಬಾಕ್ಸ್ ನೊಳಗೆ ಶವವನ್ನು ತುಂಬಿಸಿಟ್ಟು ಅದರ ಮೇಲೆಯೇ ಮಲಗುತ್ತಿದ್ದ  ಘಟನೆ ದೆಹಲಿಯ ತಾಹಿರ್ ಪುರದಲ್ಲಿ ನಡೆದಿದೆ.

ರಿಕ್ಷಾ ಡ್ರೈವರ್ ಆಗಿದ್ದ ವ್ಯಕ್ತಿ  ತನ್ನ ಮನೆಯಲ್ಲಿದ್ದ ಪತ್ನಿಯ ಸೋದರ ಸೊಸೆಯ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದ. ಇದನ್ನು ತಿಳಿದ ಪತ್ನಿ ಆಕೆಗೆ ಮನೆಗೆ ಹೋಗುವಂತೆ ತಿಳಿಸಿದ್ದಾಳೆ. ಆದರೆ ಅಧ್ಯಯನದ ಹಿನ್ನಲೆಯಲ್ಲಿ ಹುಡುಗಿ ಅದನ್ನು ನಿರಾಕರಿಸಿದ್ದಾಳೆ. ಈ ವಿಚಾರಕ್ಕೆ ದಂಪತಿಯ ನಡುವೆ ವಾಗ್ವಾದ ನಡೆದು ಆಗ ಅವರಿಬ್ಬರು ಸೇರಿ ಹುಡುಗಿಯ ತಲೆಗೆ ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದಾರೆ. ಬಳಿಕ ಶವವನ್ನು ಬೆಡ್ ಬಾಕ್ಸ್ ನೊಳಗೆ ತುಂಬಿಸಿದ್ದಾರೆ.

ಸ್ವಲ್ಪ ಸಮಯದ ಬಳಿಕ ಬೀಗ ಹಾಕಿದ ಮನೆಯೊಳಗೆ ವಾಸನೆ ಬರುವುದನ್ನು ನೆರೆಮನೆಯವರು ಗಮನಿಸಿ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಮನೆಯನ್ನು ಪರಿಶೀಲನೆ ಮಾಡಿದಾಗ ಶವ ಪತ್ತೆಯಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ದಂಪತಿಗಳಿಬ್ಬರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಕಾರಣಕ್ಕೆ ಕೋಪಗೊಂಡು ಅತ್ತೆಯನ್ನು ಕೊಂದ ಗರ್ಭಿಣಿ ಸೊಸೆ