Publish Date: Fri, 13 Nov 2020 (10:37 IST)
Updated Date: Fri, 13 Nov 2020 (10:39 IST)
ರಾಜ್ ಕೋಟ್ : 11 ವರ್ಷದ ಬಾಲಕಿಯ ಮೇಲೆ ಆಕೆಯ ತಂದೆ ಎರಡು ಬಾರಿ ಮಾನಭಂಗ ಎಸಗಿದ ಘಟನೆ. ಗುಜರಾತ್ ನ ಜಾಮ್ ನಗರ ಜಿಲ್ಲೆಯ ಜೋಡಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಾಯಿ ಕೆಲಸದ ಮೆಲೆ ಹೊರಗೆ ಹೋಗಿದ್ದಾಗ ತಂದೆ ಮಗಳ ಮೇಲೆ ಇಂತಹ ನೀಚ ಕೃತ್ಯ ಎಸಗಿದ್ದಾನೆ. ಇದರಿಂದ ಮಗಳು ಖಿನ್ನತೆಗೊಳಗಾದ ಹಿನ್ನಲೆಯಲ್ಲಿ ತಾಯಿ ಆಕೆಯನ್ನು ವಿಚಾರಿಸಿದಾಗ ಆಕೆ ನಡೆದ ಘಟನೆಯನ್ನು ವಿವರಿಸಿದ್ದಾಳೆ.
ತಕ್ಷಣ ತಾಯಿ ಪೊಲೀಸರಿಗೆ ಪತಿಯ ವಿರುದ್ಧ ದೂರು ನೀಡಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.