Select Your Language

Notifications

webdunia
webdunia
webdunia
Sunday, 2 March 2025
webdunia

ಕೊರೋನಾ ಇಫೆಕ್ಟ್: ದೀಪಾವಳಿಗೆ ಹೋಂ ಮೇಡ್ ಟಚ್

ಕೊರೋನಾ ಇಫೆಕ್ಟ್: ದೀಪಾವಳಿಗೆ ಹೋಂ ಮೇಡ್ ಟಚ್
ಬೆಂಗಳೂರು , ಶುಕ್ರವಾರ, 13 ನವೆಂಬರ್ 2020 (10:22 IST)
ಬೆಂಗಳೂರು: ಕೊರೋನಾ ಭಯದಲ್ಲೇ ಮತ್ತೊಂದು ಮಹತ್ವದ ಹಬ್ಬವನ್ನು ಆಚರಿಸುವ ಸಂದಿಗ್ಧತೆ ದೇಶವಾಸಿಗಳದ್ದಾಗಿದೆ. ಈ ಹಿನ್ನಲೆಯಲ್ಲಿ ಈ ಬಾರಿಯ ದೀಪಾವಳಿಗೆ ಹೋಂ ಮೇಡ್ ಟಚ್ ಸಿಗುತ್ತಿದೆ.


ಹೋಂ ಮೇಡ್ ದೀಪ, ಸಿಹಿ ತಿನಿಸು ತಯಾರಿಸುವತ್ತ ಜನ ಒಲವು ಹೊಂದಿದ್ದಾರೆ. ಈಗಾಗಲೇ ಪ್ರಧಾನಿ ಮೋದಿ ಕೂಡಾ ದೀಪಾವಳಿಗೆ ದೇಸೀ ಟಚ್ ನೀಡಲು ಕರೆ ನೀಡಿದ್ದಾರೆ. ಇತ್ತ ಹೊರಗಿನಿಂದ ಸ್ವೀಟ್ ತರಲು, ಹಣತೆ ತರುವುದು ಆರೋಗ್ಯದ ದೃಷ್ಟಿಯಿಂದಲೂ ಅಪಾಯಕಾರಿಯಾಗಿರುವುದರಿಂದ ಜನ ಮನೆಯಲ್ಲೇ ಎಲ್ಲವನ್ನೂ ತಯಾರಿಸುವತ್ತ ಯೋಚನೆ ಮಾಡುತ್ತಿದ್ದಾರೆ. ಗೋಮಯ ದೀಪ, ಹೋಂ ಮೇಡ್ ಚಾಕಲೇಟ್, ಸಿಹಿ ತಿನಿಸು, ಲಿಂಬೆ ಹಣ್ಣಿನಿಂದ ಹಣತೆ ಹಚ್ಚುವುದು, ಆಕಾಶ ಬುಟ್ಟಿ ಇತ್ಯಾದಿಗಳನ್ನು ಇಂಟರ್ನೆಟ್ ನೋಡಿಕೊಂಡು ತಾವೇ ತಯಾರಿಸಿ ಹಬ್ಬದ ಖುಷಿ ಅನುಭವಿಸಲು ಸಿದ್ಧತೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರವಿ ಬೆಳಗೆರೆ ನಿಧನಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಸಂತಾಪ