ವಾರಣಾಸಿ : 15 ವರ್ಷದ ಹುಡುಗಿಯೊಬ್ಬಳು ಗೆಳೆಯನ ಜೊತೆ ಸೇರಿ ತನ್ನ 11 ವರ್ಷದ ಸಹೋದರಿಯನ್ನು ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಮಿರ್ಜಾಪರದ ಹಳ್ಳಿಯೊಂದರಲ್ಲಿ ನಡೆದಿದೆ.
ಮಧ್ಯಾಹ್ನ ನಿದ್ರೆ ಮಾಡುತ್ತಿದ್ದ ತನ್ನ ತಂಗಿಯನ್ನು ಬೈಸಿಕಲ್ ರಿಪೇರಿ ಮಾಡುವ ನೆಪದಲ್ಲಿ ಹುಡುಗಿ ಮನೆಯಿಂದ ಹೊರಗೆ ಕರೆದುಕೊಂಡು ಬಂದು ತನ್ನ ಗೆಳೆಯನ ಜೊತೆ ಸೇರಿ ಕತ್ತು ಹಿಸುಕಿ ಕೊಲೆ ಮಾಡಿ ರೈಲ್ವೆ ಹಳಿಗಳ ಮೇಲೆ ಎಸೆದು ಪರಾರಿಯಾಗಿದ್ದಾಳೆ. ಇತ್ತ ತಂದೆ ಇಬ್ಬರು ಮಕ್ಕಳು ಮನೆಗೆ ಹಿಂತಿರುಗದಿದ್ದಾಗ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಹೋದರಿಯರಿಗಾಗಿ ಹುಡುಕಾಟ ನಡೆಸುತ್ತಿದ್ದಾಗ ಬಾಲಕಿಯ ಶವ ರೈಲ್ವೆ ಹಳಿಯಲ್ಲಿ ಸಿಕ್ಕಿದೆ. ಈ ಬಗ್ಗೆ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡಿದಾಗ ತಂಗಿಯನ್ನು ಮನೆಯವರು ಹೆಚ್ಚು ಪ್ರೀತಿಸುತ್ತಿದ್ದರು. ಇದಕ್ಕೆ ತಾನು ಆಕೆಯನ್ನು ಕೊಲೆ ಮಾಡಿದೆ ಎಂಬುದಾಗಿ ತಿಳಿಸಿದ್ದಾಳೆ ಎನ್ನಲಾಗಿದೆ.