ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ರ ಗೆಳೆಯ ಬಾಲಿವುಡ್ ನಲ್ಲಿ ನಡೆಯುವ ಪಾರ್ಟಿಗಳ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ.
ಬಾಲಿವುಡ್‌ನಲ್ಲಿ ಮಾದಕವಸ್ತು ಸಂಸ್ಕೃತಿ ಹೆಚ್ಚಾಗಿದೆ, ವೀಡ್, ಕೊಕೇನ್ ಬಾಲಿವುಡ್‌ನ ಪಾರ್ಟಿ ಡ್ರಗ್ ಗಳಲ್ಲಿ ಕಾಮನ್ ಆಗಿರುತ್ತದೆ ಎಂದು ಸುಶಾಂತ್ ಸಿಂಗ್ ರಜಪೂತ್ ಅವರ ಸ್ನೇಹಿತ ಯುವರಾಜ್ ಎಸ್. ಹೇಳಿದ್ದಾರೆ.
ಬಾಲಿವುಡ್ ನ ಎ - ಲಿಸ್ಟ್ ನಲ್ಲಿ ಇರುವ ನಟರು ಕೊಕೇನ್‌ಗೆ ವ್ಯಸನಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಸಿನಿಮಾ ಉದ್ಯಮದಲ್ಲಿ ಕೊಕೇನ್ ತೆಗೆದುಕೊಳ್ಳುವ ಅನೇಕ ಜನರಿದ್ದಾರೆ. ಅನೇಕ ನಟರು ಮತ್ತು ಚಲನಚಿತ್ರ ನಿರ್ಮಾಪಕರು ಮಾದಕ ದ್ರವ್ಯಗಳ ಮೇಲೆ ಮತ್ತು ಅದರ ಸುತ್ತಲೂ ತಿರುಗುತ್ತಿದ್ದಾರೆ, ಮತ್ತು ಅದಕ್ಕಾಗಿಯೇ ಈ ಹುಚ್ಚು ನಿಜವಾಗಿಯೂ ನಡೆಯುತ್ತಿದೆ "ಎಂದು ಅವರು ಹೇಳಿದ್ದಾರೆ.