Publish Date: Thu, 06 Aug 2026 (11:03 IST)
Updated Date: Thu, 06 Aug 2026 (11:05 IST)
ಪನ್ವೇಲ್: ನಾಗರಿಕ ಸಮಾಜ ತಲೆತಗ್ಗಿಸುವಂತಹ ಕ್ರೂರ ಘಟನೆಯೊಂದು ಮಹಾರಾಷ್ಟ್ರದ ಪನ್ವೇಲ್‌ನಲ್ಲಿ ನಡೆದಿದೆ. ಸಾರ್ವಜನಿಕ ಶೌಚಾಲಯವೊಂದರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಲು ಯತ್ನಿಸುತ್ತಿದ್ದ ಯುವಕನೊಬ್ಬನನ್ನು ಸ್ಥಳೀಯರು ರೆಡ್-ಹ್ಯಾಂಡ್ ಆಗಿ ಹಿಡಿದು ಪೋಲಿಸರಿಗೆ ಒಪ್ಪಿಸಿದ ಘಟನೆ ವರದಿಯಾಗಿದೆ.
ಪನ್ವೇಲ್‌ನ ವಾಲ್ಮೀಕಿ ನಗರ ಪ್ರದೇಶದಲ್ಲಿ ಈ ದಾರುಣ ಕೃತ್ಯ ನಡೆದಿದೆ. ಆರೋಪಿಯು ಅಪ್ರಾಪ್ತ ಬಾಲಕಿಗೆ ಆಮಿಷವೊಡ್ಡಿ ಪುಸಲಾಯಿಸಿ ಸಾರ್ವಜನಿಕ ಶೌಚಾಲಯದ ಒಳಗಡೆ ಕರೆದೊಯ್ದಿದ್ದಾನೆ. ಶೌಚಾಲಯದ ಬಳಿ ಅನುಮಾನಾಸ್ಪದ ಚಟುವಟಿಕೆಯನ್ನು ಗಮನಿಸಿದ ಸ್ಥಳೀಯರು ಹಾಗೂ ಸಾರ್ವಜನಿಕರು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾರೆ. ಸಾರ್ವಜನಿಕರು ಶೌಚಾಲಯದ ಬಾಗಿಲು ತೆರೆದು ಬಾಲಕಿಯನ್ನು ಕಾಮುಕನ ಕೈಯಿಂದ ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಅಪ್ರಾಪ್ತೆಯ ಮೇಲೆ ಕ್ರೌರ್ಯ ಎಸಗಲು ಯತ್ನಿಸಿದ ಆರೋಪಿಯನ್ನು ಕಂಡ ಸಾರ್ವಜನಿಕರು ಆತನಿಗೆ ಧರ್ಮದೇಟು ನೀಡಿ, ಶೌಚಾಲಯದಿಂದ ಹೊರ ಕರೆತಂದಿದ್ದಾರೆ. ಮಗುವನ್ನೂ ಸುರಕ್ಷಿತವಾಗಿ ಕರೆದೊಯ್ದಿದ್ದಾರೆ. ಬಳಿಕ ತಕ್ಷಣವೇ ಪೊಲೀಸರಿಗೆ ಮಾಹಿತಿ ತಲುಪಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪನ್ವೇಲ್ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ಆತನ ವಿರುದ್ಧ ತೀವ್ರ ಸ್ವರೂಪದ ಕಾಯ್ದೆಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಿಕ್ಕ ಮಕ್ಕಳ ಮೇಲಿನ ಇಂತಹ ಭೀಕರ ಲೈಂಗಿಕ ದೌರ್ಜನ್ಯಗಳ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗೆ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ