Publish Date: Wed, 05 Aug 2026 (18:55 IST)
Updated Date: Wed, 05 Aug 2026 (18:58 IST)
ಚೆನ್ನೈ: ಕುಟುಂಬ ಮತ್ತು ಸಂಬಂಧಿಕರಿಂದ ಹಲವು ವರ್ಷಗಳ ಕಾಲ ಎದುರಾದ ವಿರೋಧವನ್ನು ಮೆಟ್ಟಿ ನಿಂತು, ಐಟಿ ಉದ್ಯೋಗಿಯೊಬ್ಬ ಟ್ರಾನ್ಸ್‌ಜೆಂಡರ್ ಅನ್ನು ಮದುವೆಯಾಗಿರುವ ಘಟನೆ ಈರೋಡ್‌ನ ಗೋಬೊಚೆಟ್ಟಿಪಾಳ್ಯಂನಲ್ಲಿ ವರದಿಯಾಗಿದೆ.
ಕಳೆದ 7ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ, ಕುಟುಂಬದವರ ವಿರೋಧದ ನಡುವೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ನಾಮಕ್ಕಲ್ ಜಿಲ್ಲೆಯ ತಿರುಚೆಂಗೋಡ್‌ನ ಟ್ರಾನ್ಸ್‌ಜೆಂಡರ್ ನಟಿ ಕಯಲ್ವಿಳಿ ಮತ್ತು ತಿರುವಳ್ಳೂರು ಜಿಲ್ಲೆಯ ಅವಡಿ ತಾಲೂಕಿನ ಮೊರೈ ಗ್ರಾಮದ ಐಟಿ ವೃತ್ತಿಪರ ಪ್ರವೀಣ್ ರಾಜ್ ಅವರು ಸುಮಾರು ಏಳು ವರ್ಷಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದರು.
ಆರಂಭದಲ್ಲಿ ಸ್ನೇಹಿತರಾಗಿದ್ದ ಇವರು ಎರಡು ವರ್ಷಗಳ ಬಳಿಕ ಪ್ರೀತಿಯಾಗಿ ಬದಲಾಯಿತು.
ಪ್ರವೀಣ್ ಅವರ ಕುಟುಂಬದಿಂದ ತೀವ್ರ ವಿರೋಧವಿದ್ದರೂ, ಅವರು ಕಯಲ್ವಿಳಿ ಅವರ ಬೆಂಬಲಕ್ಕೆ ನಿಂತರು ಮತ್ತು ತಮ್ಮ ಸಂಬಂಧವನ್ನು ಮುಂದುವರಿಸುವ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ.
ಕಯಲ್ವಿಳಿ ಅವರು 'ತೋಟ್ರಮ್', 'ರಾವಣ ರಾಮನ್' ಮತ್ತು 'ಕಂಧನ್ ಮಲೈ' ಸೇರಿದಂತೆ ತಮಿಳು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಪ್ರಸ್ತುತ 'ಟಾಕ್ಸಿಕ್' ಹಾಗೂ 'ಪಾರ್ಟಿ' ಎಂಬ ವೆಬ್ ಸರಣಿಗಳಲ್ಲಿ ನಟಿಸುತ್ತಿದ್ದಾರೆ.
ಕುಟುಂಬದ ಸದಸ್ಯರು, ಸಂಬಂಧಿಕರು ಮತ್ತು ಸ್ನೇಹಿತರಿಂದ ತೀವ್ರ ವಿರೋಧ ಹಾಗೂ ಕಿರುಕುಳವನ್ನು ಎದುರಿಸಬೇಕಾಯಿತು ಎಂದು ದಂಪತಿಗಳು ತಿಳಿಸಿದರು.
ತಮ್ಮನ್ನು ಬೇರ್ಪಡಿಸಲು ಹಲವು ಪ್ರಯತ್ನಗಳು ನಡೆದಿದ್ದರಿಂದ ಕುಟುಂಬಗಳಲ್ಲಿ ಆಗಾಗ್ಗೆ ಸಮಸ್ಯೆಗಳು ಮತ್ತು ವಾಗ್ವಾದಗಳು ಉಂಟಾಗುತ್ತಿದ್ದವು ಎಂದೂ ಅವರು ಹೇಳಿದರು.
ಹಲವು ವರ್ಷಗಳ ಕಾಲ ಒಟ್ಟಿಗಿದ್ದ ನಂತರ, ಇನ್ನು ಮುಂದೆ ವಿವಾಹವನ್ನು ವಿಳಂಬ ಮಾಡಬಾರದೆಂದು ದಂಪತಿಗಳು ನಿರ್ಧರಿಸಿದರು. ಇನ್ನೂ ದಂಪತಿಗಳು ಮಗುವನ್ನು ದತ್ತು ಪಡೆಯುವ ಬಗ್ಗೆ ಚಿಂತಿಸಿರುವುದಾಗಿ ಹೇಳಿದ್ದಾರೆ.
About Writer
ಸಂಪ್ರಿಯ
ಕನ್ನಡ ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷದಲ್ಲಿ ಬೇರೆ ಬೇರೆ ಸಂಸ್ಥೆಗಳಲ್ಲಿ ರಿಪೋರ್ಟರ್ ಆಗಿ, ಸಬ್ ಎಡಿಟರ್ ಆಗಿ, ಇದೀಗ ಕಂಟೆಂಟ್ ರೈಟರ್ ಆಗಿ ವೆಬ್ದುನಿಯಾದಲ್ಲಿ ಕೆಲಸ. ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು 2016ನೇ ಸಾಲಿನಲ್ಲಿ ಪಡೆದಿರುತ್ತೇನೆ. ಮನರಂಜನೆ, ಲೈಫ್ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ವಿಶೇಷ ಆಸಕ್ತಿ. ....
ಮತ್ತಷ್ಟು ಓದಿ