Daily Horoscope

Select Your Language

Notifications

webdunia
webdunia
webdunia
webdunia

ಇಂಥಾ ಸ್ವಾರ್ಥಿ ಮಕ್ಕಳು ಇದ್ದರೆಷ್ಟು...ತಂದೆಯ ಅಂತ್ಯಕ್ರಿಯೆ ಆನ್ ಲೈನ್ ವೀಕ್ಷಿಸಿ ಜುಜುಬಿ ದುಡ್ಡು ಕೊಟ್ಟು ಕೈತೊಳೆದುಕೊಂಡ್ರು Video

Viral video online last rites
Photo Credit: X
ಕಲಿಯುಗದ ಸ್ವಾರ್ಥ ಮತ್ತು ಕಲ್ಲುಮನಸ್ಸಿಗೆ ಸಾಕ್ಷಿಯೆನ್ನುವಂತಹ ಅತ್ಯಂತ ದಾರುಣ ಹಾಗೂ ಭಾವುಕ ಘಟನೆಯೊಂದು ಹರಿಯಾಣದ ಸೋನಿಪತ್‌ನಲ್ಲಿ ವರದಿಯಾಗಿದೆ. ತಮ್ಮ ಇಡೀ ಜೀವನವನ್ನು ಹೆಣ್ಣುಮಕ್ಕಳ ಶಿಕ್ಷಣ ಮತ್ತು ಭವಿಷ್ಯಕ್ಕಾಗಿ ಧಾರೆ ಎರೆದಿದ್ದ ತಂದೆಯೊಬ್ಬರು ವೃದ್ಧಾಶ್ರಮದಲ್ಲಿ ಕೊನೆಯುಸಿರೆಳೆದಾಗ, ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮಕ್ಕಳಿಗೆ 'ಸಮಯವಿಲ್ಲ' ಎಂಬ ಉತ್ತರ ಸಿಕ್ಕಿದೆ!
 
ಆನ್‌ಲೈನ್ ಮೂಲಕ ₹5,100 ಕಳುಹಿಸಿ, ವಿಡಿಯೋ ಕಾಲ್ ಮೂಲಕ ತಂದೆಯ ದಹನ ಸಂಸ್ಕಾರವನ್ನು ನೋಡಿದ ಹೆಣ್ಣುಮಕ್ಕಳ ಈ ಧೋರಣೆ ಜಾಲತಾಣಗಳಲ್ಲಿ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

 

ಮುಂಬೈನ ಪ್ರಸಿದ್ಧ ಜವಳಿ ಉದ್ಯಮಿ

 
ಮೂಲತಃ ಮುಂಬೈನ ಪ್ರಸಿದ್ಧ ಬಟ್ಟೆ ವ್ಯಾಪಾರಿಯಾಗಿದ್ದ ಶಿವಚರನ್ ರಾಮ್‌ರತನ್ ಗುಪ್ತಾ (74) ಅವರು ತಮ್ಮ ಮೂವರು ಹೆಣ್ಣುಮಕ್ಕಳನ್ನು ಉತ್ತಮವಾಗಿ ಸಾಕಿ ಬೆಳೆಸಿ, ವಿದ್ಯಾವಂತರನ್ನಾಗಿ ಮಾಡಿದ್ದರು. ಕೊನೆಯ ದಿನಗಳಲ್ಲಿ ಅವರು ಪತ್ನಿಯೊಂದಿಗೆ ಹರಿಯಾಣದ ಸೋನಿಪತ್‌ನಲ್ಲಿರುವ ವೃದ್ಧಾಶ್ರಮದಲ್ಲಿ ವಾಸಿಸುತ್ತಿದ್ದರು. ಎರಡು ವರ್ಷಗಳ ಹಿಂದೆ ಅವರ ಪತ್ನಿಯೂ ಅದೇ ವೃದ್ಧಾಶ್ರಮದಲ್ಲಿ ನಿಧನರಾಗಿದ್ದರು.
 
ಮಂಗಳವಾರ ಶಿವಚರನ್ ಗುಪ್ತಾ ಅವರು ವೃದ್ಧಾಪ್ಯ ಸಂಬಂಧಿತ ಅನಾರೋಗ್ಯದಿಂದ ನಿಧನರಾದರು. ತಕ್ಷಣವೇ ವೃದ್ಧಾಶ್ರಮದ ಸಿಬ್ಬಂದಿ ನೇಪಾಳ, ಉತ್ತರ ಪ್ರದೇಶ ಮತ್ತು ಮುಂಬೈನಲ್ಲಿ ನೆಲೆಸಿರುವ ಅವರ ಮೂವರು ಶಾಲಾ ಶಿಕ್ಷಕಿ ಮಕ್ಕಳಿಗೂ ವಿಷಯ ತಿಳಿಸಿದರು.  
 
ತಂದೆಯ ಸಾವು ವರದಿಯಾದ ಮೇಲೆಯೂ ಯಾವುದೇ ಮಗಳು ಬರಲು ಸಿದ್ಧವಿರಲಿಲ್ಲ. ಒಬ್ಬ ಮಗಳು "ತುಂಬಾ ದೂರವಿದೆ" ಎಂದರೆ, ಇನ್ನೊಬ್ಬರು "ಬರಲು ಸಮಯವಿಲ್ಲ" ಎಂದು ನೆಪ ಹೇಳಿ ಜಾರಿಕೊಂಡರು.
 
ಅಂತ್ಯಕ್ರಿಯೆಯನ್ನು ಅಲ್ಲಿಯೇ ನೆರವೇರಿಸುವಂತೆ ಕೋರಿದ ಮಕ್ಕಳು, ಅದಕ್ಕಾಗಿ ಆನ್‌ಲೈನ್ ಮೂಲಕ ₹5,100 ಗೂಗಲ್ ಪೇ/ಫೋನ್ ಪೇ ಮೂಲಕ ಕಳುಹಿಸಿಕೊಟ್ಟರು. ವೃದ್ಧಾಶ್ರಮದ ಸಿಬ್ಬಂದಿ ಹಾಗೂ ಸ್ಥಳೀಯರೇ ಚಿತೆಗೆ ಬೆಂಕಿ ಇಟ್ಟು ದಹನ ಸಂಸ್ಕಾರ ನಡೆಸಿದರು. ಈ ಇಡೀ ಪ್ರಕ್ರಿಯೆಯನ್ನು ಮಕ್ಕಳು ವಿಡಿಯೋ ಕಾಲ್ ಮೂಲಕ ನೋಡಿ ಮುಗಿಸಿದರು!
 
"ಇನ್ನೂ ಎಷ್ಟು ಹೊತ್ತು ಬೇಕು?": ಕಲ್ಲುಮನಸ್ಸಿನ ಪ್ರಶ್ನೆ!ದಹನ ಸಂಸ್ಕಾರ ನಡೆಯುತ್ತಿರುವಾಗಲೇ ವಿಡಿಯೋ ಕಾಲ್‌ನಲ್ಲಿ ಮಗಳೊಬ್ಬಳು "ಇನ್ನೂ ಎಷ್ಟು ಹೊತ್ತು ಬೇಕು? ನಾವಿನ್ನು ಸ್ನಾನ ಮಾಡಿ ಊಟ ಮಾಡಬೇಕು" ಎಂದು ಕೇಳಿದ ಮಾತುಗಳು ಸಿಬ್ಬಂದಿಯ ಕಣ್ಣಿರು ತರಿಸಿವೆ.  ತಂದೆಯ ಅಸ್ತಿಯನ್ನು (ಬೂದಿ) ಗಂಗೆಯಲ್ಲಿ ವಿಸರ್ಜಿಸಲು ಕೂಡ ತಮಗೆ ಸಮಯವಿಲ್ಲ ಎಂದು ತಿಳಿಸಿದ ಕಾರಣ, ಆಶ್ರಮದ ಸಿಬ್ಬಂದಿಯೇ ಅವರ ನೇತ್ರದಾನದ ಆಸೆಯನ್ನು ಈಡೇರಿಸಿ, ಅಂತ್ಯಕ್ರಿಯೆಯ ಎಲ್ಲಾ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಿದ್ದಾರೆ.   
 
ಈ ಘಟನೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ನೆಟ್ಟಿಗರು ಕಣ್ಣೀರು ಹಾಕಿದ್ದಾರೆ. "ಆಸ್ತಿ ಮತ್ತು ಹಣಕ್ಕಾಗಿ ಹೆತ್ತವರನ್ನು ಬಳಸಿಕೊಳ್ಳುವ ಮಕ್ಕಳು, ಅವರ ಕೊನೆಯ ಕಾಲದಲ್ಲಿ ಕಾಳಜಿ ವಹಿಸದಿರುವುದು ಮಾನವೀಯತೆಯ ಪತನ ಸಂಕೇತ" ಎಂದು ಜನರು ಕಮೆಂಟ್ ಮಾಡುತ್ತಿದ್ದಾರೆ.
pic.twitter.com/z2pwCA970W

 

— Priya singh (@priyarajputlive) August 5, 2026

Share this Story:

Follow Webdunia kannada

ಮುಂದಿನ ಸುದ್ದಿ

ನಿಜಕ್ಕೂ ಈ ಹಸುವಿನದ್ದು ಗಟ್ಟಿ ಜೀವವೇ... ಯಾಕೆ ಅಂತೀರಾ ಈ ವಿಡಿಯೋ ತಪ್ಪದೇ ನೋಡಿ Video