Publish Date: Thu, 06 Aug 2026 (10:09 IST)
Updated Date: Thu, 06 Aug 2026 (10:16 IST)
ಸಾವು ಬೇಕಾದಾಗ ಬರುವಂತಹದ್ದಲ್ಲ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ. ವೇಗವಾಗಿ ಬಂದ ಟ್ರೈನ್ ಡಿಕ್ಕಿ ಹೊಡೆದರೂ ಈ ಹಸು ಬದುಕಿದ್ದು ನಿಜಕ್ಕೂ ಪವಾಡವೇ ಸರಿ.
ಇತ್ತೀಚೆಗಿನ ದಿನಗಳಲ್ಲಿ ಸಾಕಷ್ಟು ಬಾರಿ ಟ್ರೈನ್ ಗಳ ಮುಂದೆ ಪ್ರಾಣಿಗಳು ಅಡ್ಡ ಬರುವುದು, ಅಪಘಾತಗಳಾಗುವ ಉದಾಹರಣೆಗಳು ಕಂಡುಬರುತ್ತಿವೆ. ಮನುಷ್ಯರೂ ಸಾಕಷ್ಟು ಬಾರಿ ಹತ್ತುವ ಅವಸರದಲ್ಲಿ ರೈಲಿನಡಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುವುದಿದೆ.
ಆದರೆ ಅಂತಹದ್ದರಲ್ಲಿ ಈ ಹಸು ರೈಲು ಢಿಕ್ಕಿ ಹೊಡೆದರೂ ಬದುಕಿದ್ದು ಪವಾಡವೇ ಸರಿ. ರೈಲ್ವೇ ಕ್ರಾಸಿಂಗ್ ಬಳಿ ಹಸುವೊಂದು ಅಪಾಯದ ಅರಿವಿಲ್ಲದೇ ತನ್ನ ಪಾಡಿಗೆ ತಾನು ಹಳಿ ದಾಟುತ್ತಿತ್ತು. ಈ ವೇಳೆ ವೇಗವಾಗಿ ರೈಲೊಂದು ಬರುತ್ತಿತ್ತು.
ಹಸುವಿಗೆ ಢಿಕ್ಕಿ ಹೊಡೆದುಕೊಂಡು ರೈಲು ಮುಂದೆ ಸಾಗುತ್ತದೆ. ಢಿಕ್ಕಿ ಹೊಡೆದ ರಭಸಕ್ಕೆ ಹಸು ಪಕ್ಕಕ್ಕೆ ಹೊರಳಿ ಬೀಳುತ್ತದೆ. ಆದರೆ ಅದೃಷ್ಟವಶಾತ್ ಅದಕ್ಕೆ ಏನೂ ಆಗುವುದಿಲ್ಲ. ಕ್ಷಣದಲ್ಲೇ ಸಾವರಿಸಿಕೊಂಡು ಏಳುವ ಹಸು ಮುಂದೆ ಸಾಗುತ್ತದೆ. ಇದನ್ನು ನೋಡಿದರೆ ಸಾವಿನ ಕ್ಷಣ ಅದಕ್ಕೆ ಇನ್ನೂ ಭಗವಂತ ಬರೆದಿಲ್ಲ ಎನಿಸುತ್ತದೆ. ರೈಲ್ವೇ ಕ್ರಾಸಿಂಗ್ ಬಳಿ ಇದನ್ನು ವೀಕ್ಷಿಸುತ್ತಿದ್ದವರು ವಿಡಿಯೋ ಮಾಡಿದ್ದು ಹಸುವಿನ ಜೀವ ಗಟ್ಟಿಯಿತ್ತು ಎಂದಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ