Daily Horoscope

Select Your Language

Notifications

webdunia
webdunia
webdunia
webdunia

ಕಿತ್ತು ತಿನ್ನಬೇಡವೋ... ಮರಿ ಆನೆಗೆ ಬುದ್ಧಿ ಕಲಿಸಿದ ತಾಯಿ ಆನೆ, ಇದು ನಮಗೂ ಪಾಠ Video

Viral video elephant
ಬೀದಿ ಬದಿಯ ಅಂಗಡಿಯೊಂದರಿಂದ ಬಲವಂತವಾಗಿ ಬಾಳೆಹಣ್ಣು ಕಿತ್ತು ತಿನ್ನಲು ಹೊರಟ ಮರಿ ಆನೆಯನ್ನು ತಾಯಿ ಆನೆ ತಡೆದ ಈ ವಿಡಿಯೋ ನಮಗೂ ಜೀವನ ಪಾಠ ಹೇಳಿಕೊಡುತ್ತದೆ.

ಈ ವಿಡಿಯೋ ಸ್ವಲ್ಪ ಹಳೆಯದೇ ಇರಬಹುದು. ಆದರೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋ ಮನುಷ್ಯರಿಗೂ ಪಾಠವಾಗಿದೆ. ನಮ್ಮ ಸಮಾಜದಲ್ಲಿ ಕಿತ್ತು ತಿನ್ನುವ ಎಷ್ಟೋ ಜನರಿಗೆ ನೀಡುವ ಉತ್ತಮ ಸಂದೇಶವಾಗಿದೆ.

ಬೀದಿಯಲ್ಲಿ ತಾಯಿ ಆನೆಯೊಂದಿಗೆ ಮರಿ ಆನೆ ನಡೆದುಕೊಂಡು ಬರುತ್ತಿರುತ್ತದೆ. ಈ ವೇಳೆ ರಸ್ತೆ ಬದಿಯಲ್ಲಿದ್ದ ಅಂಗಡಿಯೊಂದರಲ್ಲಿ ನೇತಾಡುತ್ತಿದ್ದ ಹಣ್ಣಾದ ಬಾಳೆಹಣ್ಣಿನ ಗೊನೆ ನೋಡಿ ಮರಿ ಆನೆಗೆ ಸಹಜವಾಗಿಯೇ ಆಸೆಯಾಗುತ್ತದೆ.

ಹೀಗಾಗಿ ನೇರವಾಗಿ ಅಂಗಡಿಗೆ ನುಗ್ಗಿ ತನ್ನ ಪುಟಾಣಿ ಸೊಂಡಿಲಿನಿಂದ ಬಾಳೆಗೊನೆ ಕಿತ್ತುಕೊಳ್ಳಲು ಪ್ರಯತ್ನಿಸುತ್ತಿರುತ್ತದೆ. ಈ ವೇಳೆ ಹಿಂದಿನಿಂದ ಬಂದ ತಾಯಿ ಆನೆ ಅದನ್ನು ತಡೆದು ಹಿಂದಕ್ಕೆ ಎಳೆದುಕೊಳ್ಳುತ್ತದೆ. ಈ ವಿಡಿಯೋ ನೆಟ್ಟಿಗರು ಇನ್ನೊಬ್ಬರಿಂದ ಕಿತ್ತುಕೊಳ್ಳುವ ಮನುಷ್ಯರೂ ಈ ಆನೆಯನ್ನು ನೋಡಿ ಪಾಠ ಕಲಿಯಬೇಕು ಎಂದಿದ್ದಾರೆ.

pic.twitter.com/PSwT0n23pI

 

— ▫️रद्दी पन्ने▫️ (@Raddipanne) August 4, 2026

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ಕರ್ನಾಟಕ ಈ ಭಾಗಗಳಲ್ಲಿ ಇಂದೂ ಭಾರೀ ಮಳೆ ನಿರೀಕ್ಷೆ