Select Your Language

Notifications

webdunia
webdunia
webdunia
webdunia

ಬಿಳಿ ಮಾಯಾ ಜಿಂಕೆಯನ್ನು ನೋಡಿದ್ದೀರಾ ವಿಡಿಯೋ ವೈರಲ್

White deer

Krishnaveni K

ಬೆಂಗಳೂರು , ಮಂಗಳವಾರ, 4 ಫೆಬ್ರವರಿ 2025 (15:35 IST)
ಬೆಂಗಳೂರು: ಸಾಮಾನ್ಯವಾಗಿ ನಾವು ತಿಳಿ ಹಳದಿ, ಮಣ್ಣಿನ ಬಣ್ಣದ ಜಿಂಕೆಯನ್ನು ನೋಡಿರುತ್ತೇವೆ. ಆದರೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಿಳಿ ಬಣ್ಣದ ಜಿಂಕೆಯ ವಿಡಿಯೋ ವೈರಲ್ ಆಗಿದೆ.
 

ಥೇಟ್ ಮಾಮೂಲು ಜಿಂಕೆಯದ್ದೇ ಆಕಾರ. ಆದರೆ ಮೈ ಪೂರಾ ಬೆಣ್ಣೆಯಂತೆ ಬಿಳಿ. ಕಣ್ಣು ಪಿಂಕ್ ಆಗಿ ಕ್ಯೂಟ್ ಆಗಿರುವ ಜಿಂಕೆಯೊಂದರ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ್ದಾರೆ.

ಈ ಹಿಂದೆ ಉತ್ತರಪ್ರದೇಶದ ವನ್ಯಜೀವಿ ಅಭಯಾರಣ್ಯವೊಂದರಲ್ಲಿ ಇತರೆ ಜಿಂಕೆಗಳ ಜೊತೆ ಇರುವ ಇಂತಹದ್ದೇ ಬಿಳಿ ಬಣ್ಣದ ಜಿಂಕೆ ಪತ್ತೆಯಾಗಿತ್ತು. ಇದನ್ನು ಫೋಟೋ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದರು. ಈಗ ಅಂತಹದ್ದೇ ಜಿಂಕೆಯ ವಿಡಿಯೋ ವೈರಲ್ ಆಗಿದೆ.

ಹಿಮದಲ್ಲಿ ಅಪರೂಪದ ಈ ಜಿಂಕೆಯನ್ನು ವ್ಯಕ್ತಿಯೊಬ್ಬ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾನೆ. ಆದಾಗ್ಯೂ, ಪ್ರಾಣಿಶಾಸ್ತ್ರಜ್ಞರು 30,000 ಕ್ಕೂ ಹೆಚ್ಚು ಜಿಂಕೆ ಜನ್ಮಗಳಲ್ಲಿ, ಅಂತಹ ಒಂದು ಬಿಳಿ ಜಿಂಕೆ ಹುಟ್ಟುತ್ತದೆ ಎಂದು ಹೇಳುತ್ತಾರೆ. ಇಂತಹ ಜಿಂಕೆಯನ್ನು ಕಂಡರೆ ಎಲ್ಲವೂ ಶುಭವಾಗುತ್ತದೆ ಎಂಬುದು ಅಮೆರಿಕನ್ನರ ನಂಬಿಕೆ.

Share this Story:

Follow Webdunia kannada

ಮುಂದಿನ ಸುದ್ದಿ

Mahakumbh Mela 2025: ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಭೂತಾನ್ ರಾಜ