ಮುಂಬೈ: ಬಾಲಿವುಡ್ ಹಿರಿಯ ಗಾಯಕ ಉದಿತ್ ನಾರಾಯಣ್ ಲೈವ್ ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲೆ ನಡೆದುಕೊಂಡ ರೀತಿಗೆ ಎಲ್ಲೆಡೆಯಿಂದ ಟೀಕೆ ವ್ಯಕ್ತವಾಗಿದೆ.
ಹಿಂದಿ ಮಾತ್ರವಲ್ಲದೆ ಕನ್ನಡ, ಮಲಯಾಳಂ, ತೆಲುಗು, ತಮಿಳು ಸೇರಿದಂತೆ ಬಹುಭಾಷೆಗಳಲ್ಲಿ ಹಾಡಿ ಅಪಾರ ಜನಪ್ರಿಯತೆ ಗಳಿಸಿಕೊಂಡಿರುವ 69 ವರ್ಷದ ಉದಿತ್ ನಾರಾಯಣ್ ಯುವತಿಯೊಂದಿಗೆ ಅಸಭ್ಯ ವರ್ತನೆ ತೋರಿದ್ದಾರೆ.
ಲೈವ್ ಕಾರ್ಯಕ್ರಮದಲ್ಲಿ ಅನೇಕರು ಉದಿತ್ ಬಳಿ ಸೆಲ್ಫೀಗಾಗಿ ಬಂದಿದ್ದಾರೆ. ಈ ವೇಳೆ ಇಬ್ಬರು ಯುವತಿಯರೂ ಉದಿತ್ ಬಳಿ ಸೆಲ್ಫೀ ಕೇಳಿಕೊಂಡು ಬಂದಿದ್ದಾರೆ. ಹೆಚ್ಚು ಕಡಿಮೆ ಅವರೆಲ್ಲರೂ ಉದಿತ್ ಮಗಳ ವಯಸ್ಸಿನವರು. ಓರ್ವ ಯುವತಿಗೆ ಕೆನ್ನೆಗೆ ಮುತ್ತು ಕೊಟ್ಟ ಉದಿತ್ ಮತ್ತೊಬ್ಬಾಕೆಗೆ ತುಟಿಗೇ ಮುತ್ತು ಕೊಟ್ಟಿದ್ದಾರೆ!
ಈ ವಿಡಿಯೋ ನೋಡಿ ನೆಟ್ಟಿಗರು ಶಾಕ್ ಗೊಳಗಾಗಿದ್ದಾರೆ. ಹಿರಿಯ ಗಾಯಕ, ಇಷ್ಟೊಂದು ಗೌರವ ಸಂಪಾದಿಸಿರುವ ವ್ಯಕ್ತಿ ವೇದಿಕೆಯಲ್ಲಿ ಹೀಗೆ ಮಾಡಿದ್ದು ನಾಚಿಕೆಗೇಡು ಎಂದಿದ್ದಾರೆ. ಇನ್ನು ತಮ್ಮ ವಿಡಿಯೋ ವೈರಲ್ ಆಗುತ್ತಿದ್ದಂತೇ ಪ್ರತಿಕ್ರಿಯಿಸಿರುವ ಉದಿತ್, ಆಕೆ ನನಗೆ ಮುತ್ತು ಕೊಟ್ಟಾಗ ಪ್ರತಿಯಾಗಿ ಪ್ರೀತಿ ತೋರಿಸಿದೆ ಅಷ್ಟೇ. ಇದರಲ್ಲಿ ವಿವಾದ ಮಾಡುವಂತದ್ದು ಏನೂ ಇಲ್ಲ ಎಂದಿದ್ದಾರೆ.