ಚೆನ್ನೈ: ಬಸ್ ನಲ್ಲಿ ಡೋರ್ ಪಕ್ಕ ಮಗುವನ್ನು ಹಿಡಿದುಕೊಂಡು ಕೂತಿದ್ದರೆ ಎಷ್ಟು ಹುಷಾರಾಗಿರಬೇಕು ಎಂಬುದಕ್ಕೆ ಈ ವಿಡಿಯೋವೇ ಸಾಕ್ಷಿ. ಈ ವಿಡಿಯೋವನ್ನು ನೋಡಿದ್ರೆರ ನಿಜಕ್ಕೂ ಎದೆ ಝಲ್ಲೆನಿಸುತ್ತದೆ.
ಇದು ತಮಿಳುನಾಡಿನಲ್ಲಿ ನಡೆದ ಘಟನೆ. ತಮಿಳುನಾಡಿನ ಶ್ರೀವಿಲ್ಲಿಪುತ್ತೂರ್ ನಲ್ಲಿ ಖಾಸಗಿ ಬಸ್ ನಲ್ಲಿ ನಡೆದ ಘಟನೆ. ಡೋರ್ ಪಕ್ಕ ಕಿಟಿಕಿ ಹತ್ತಿರದ ಸೀಟ್ ನಲ್ಲಿ ಮಹಿಳೆ ತನ್ನ ಮಗುವನ್ನು ಹಿಡಿದುಕೊಂಡು ಕೂತಿರುತ್ತಾಳೆ. ಮಗು ಅಮ್ಮನ ಹೆಗಲಿನಲ್ಲಿ ನಿದ್ರೆ ಮಾಡುತ್ತಿರುತ್ತದೆ.
ಈ ವೇಳೆ ಬಸ್ ಚಾಲಕ ಸಡನ್ ಬ್ರೇಕ್ ಹಾಕುತ್ತಾನೆ. ಈ ವೇಳೆ ಅಮ್ಮನ ಮಡಿಲಲ್ಲಿದ್ದ ಮಗು ಕೈ ಜಾರಿ ರಸ್ತೆಗೇ ಬಿದ್ದು ಬಿಡುತ್ತದೆ. ತಕ್ಷಣವೇ ತಾಯಿ ಹಾಗೂ ಬಸ್ ನಲ್ಲಿದ್ದ ಕೆಲವರು ಓಡೋರಿ ಹೋಗುತ್ತಾರೆ. ಮಗುವಿಗೆ ಗಂಭೀರ ಗಾಯಗಳಾಗಿದ್ದು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗುತ್ತದೆ.
ಈ ಘಟನೆಯಲ್ಲಿ ಮಗುವಿನ ಮತ್ತೊಬ್ಬ ಸಂಬಂಧಿಕರಿಗೂ ಗಾಯವಗಿದೆ ಎನ್ನಲಾಗಿದೆ. ಮಕ್ಕಳನ್ನು ಎತ್ತಿಕೊಂಡು ಡೋರ್ ಹತ್ತಿರದ ಸೀಟ್ ನಲ್ಲಿ ಕುಳಿತುಕೊಳ್ಳುವುದಿದ್ದರೆ ಎಚ್ಚರವಾಗಿರಬೇಕು ಎಂಬುದಕ್ಕೆ ಈ ವಿಡಿಯೋವೇ ಸಾಕ್ಷಿಯಾಗಿದೆ.