Select Your Language

Notifications

webdunia
webdunia
webdunia
webdunia

Dog viral video: ಚಿರತೆಯಿಂದ ತಮ್ಮ ಗೆಳೆಯನ ರಕ್ಷಿಸಿದ ನಾಯಿಗಳು

Dog viral video

Krishnaveni K

ಉತ್ತರಾಖಂಡ್ , ಗುರುವಾರ, 15 ಮೇ 2025 (10:00 IST)
Photo Credit: X
ಉತ್ತರಾಖಂಡ್: ಸ್ನೇಹಿತರು ಎಂದರೆ ಮನುಷ್ಯರೊಳಗೆ ಮಾತ್ರವಲ್ಲ. ಪ್ರಾಣಿಗಳೊಳಗೂ ಅಪಾರ ಸ್ನೇಹ ವಿಶ್ವಾಸವಿರುತ್ತದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ಚಿರತೆ ದಾಳಿ ಮಾಡಲು ಬಂದಾಗ ತಮ್ಮ ಗೆಳೆಯನನ್ನು ನಾಯಿಗಳು ಗುಂಪಾಗಿ ಸೇರಿಸಿ ರಕ್ಷಿಸಿದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಉತ್ತರಾಂಖಡ್ ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮನೆಯೊಂದರ ಮುಂದೆ ನಾಯಿಯೊಂದು ಮಲಗಿರುತ್ತದೆ. ಹಠಾತ್ ಆಗಿ ಬರುವ ಚಿರತೆ  ನಾಯಿಯನ್ನು ಸುಲಭವಾಗಿ ಶಿಕಾರಿ ಮಾಡಿಬಿಡುವ ಎಂದೆಣಿಸಿರುತ್ತದೆ. ಆದರೆ ಆ ನಾಯಿಯ ಅದೃಷ್ಟ ಚೆನ್ನಾಗಿತ್ತು ಎಂದೇ ಹೇಳಬಹುದು.

ನಾಯಿ ಕುತ್ತಿಗೆಗೇ ಚಿರತೆ ಬಾಯಿ ಹಾಕುತ್ತಿದ್ದಂತೆ ಅದರ ಕಿರುಚಾಟ ಕೇಳಿ ಅಕ್ಕಪಕ್ಕದಲ್ಲಿದ್ದ ನಾಯಿಯ ಸ್ನೇಹಿತ ನಾಯಿಗಳು ಒಮ್ಮೆಲೇ ಚಿರತೆ ಮೇಲೆ ಮುಗಿಬಿದ್ದಿವೆ. ಒಂದು ನಾಯಿ ಚಿರತೆಯ ಕಾಲು ಹಿಡಿದೆಳೆದರೆ ಇನ್ನೊಂದು ಬೆನ್ನು ಕಚ್ಚಿ ಅಟ್ಯಾಕ್ ಮಾಡಿವೆ.

ಹೀಗೆ ನಾಯಿಗಳೆಲ್ಲಾ ಒಟ್ಟಾಗಿ ಅಟ್ಯಾಕ್ ಮಾಡಿದಾಗ ಚಿರತೆಯ ಹಿಡಿತದಿಂದ ನಾಯಿ ತಪ್ಪಿಸಿಕೊಂಡಿತು. ಅಷ್ಟಕ್ಕೇ ಉಳಿದ ನಾಯಿಗಳು ಸುಮ್ಮನಾಗಲಿಲ್ಲ. ಆ ಚಿರತೆಯನ್ನು ಓಡಿಸಿಯೇ ಬಿಟ್ಟಿವೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಗಾದೆ ಸುಮ್ಮನೇ ಮಾಡಿಲ್ಲ. ಈ ವೈರಲ್ ವಿಡಿಯೋ ನೋಡಿ.



Share this Story:

Follow Webdunia kannada

ಮುಂದಿನ ಸುದ್ದಿ

India Pakistan: ಪಾಕಿಸ್ತಾನದ ಕ್ಷಿಪಣಿಗಳನ್ನು ಹೊಡೆದುರುಳಿಸಿದ್ದು 400 ಅಲ್ಲ, ಇನ್ಯಾರು