Select Your Language

Notifications

webdunia
webdunia
webdunia
webdunia

India Pakistan: ಪಾಕಿಸ್ತಾನದ ಕ್ಷಿಪಣಿಗಳನ್ನು ಹೊಡೆದುರುಳಿಸಿದ್ದು 400 ಅಲ್ಲ, ಇನ್ಯಾರು

India Air defence system

Krishnaveni K

ನವದೆಹಲಿ , ಗುರುವಾರ, 15 ಮೇ 2025 (09:55 IST)
ನವದೆಹಲಿ: ಪಾಕಿಸ್ತಾನದ ಕ್ಷಿಪಣಿಗಳನ್ನು ಹೊಡೆದುರುಳಿಸಿದ್ದು ರಷ್ಯಾ ನಿರ್ಮಿತ ಎಸ್ 400 ಅಲ್ಲ. ಇನ್ನು ಯಾರು? ಕೇಂದ್ರ ಸರ್ಕಾರ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದೆ ನೋಡಿ.

ಆಪರೇಷನ್ ಸಿಂಧೂರ್ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಸಂಘರ್ಷವೇರ್ಪಟ್ಟಿತ್ತು. ಪಾಕಿಸ್ತಾನ ಸಾಕಷ್ಟು ಕ್ಷಿಪಣಿ ಮತ್ತು ಡ್ರೋಣ್ ಗಳನ್ನು ಭಾರತದ 15 ನಗರಗಳನ್ನು ಗುರಿಯಾಗಿರಿಸಿ ದಾಳಿ ಮಾಡಿತ್ತು.

ಆದರೆ ಯಾವುದೂ ಭಾರತಕ್ಕೆ ಹಾನಿ ಮಾಡಲಿಲ್ಲ. ಅಗಸದಲ್ಲೇ ಭಾರತ ಡ್ರೋಣ್ ಗಳನ್ನು ಹೊಡೆದುರುಳಿಸಿತ್ತು. ಇದಕ್ಕೆ ಕಾರಣ ರಷ್ಯಾ ನಿರ್ಮಿತ ಏರ್ ಡಿಫೆನ್ಸ್ ಸಿಸ್ಟಂ ಎಸ್ 400 ಎನ್ನಲಾಗಿತ್ತು. ಆದರೆ ಈಗ ಕೇಂದ್ರ ಸರ್ಕಾರ ಈ ಕೆಲಸ ಮಾಡಿದ್ದು ಸ್ವದೇಶೀ ನಿರ್ಮಿತ ಆಕಾಶ್ ಏರ್ ಡಿಫೆನ್ಸ್ ಸಿಸ್ಟಂ ಎಂದಿದೆ.

ಇದು ಭಾರತಕ್ಕೆ ನಿಜವಾಗಿಯೂ ಹೆಗ್ಗಳಿಕೆಯಾಗಿದೆ. ಭಾರತ ನಿರ್ಮಿತ ಏರ್ ಡಿಫೆನ್ಸ್ ಸಿಸ್ಟಂ ಶತ್ರು ರಾಷ್ಟ್ರವನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಲು ಸಮರ್ಥವಾಗಿದ್ದರೆ ಆತ್ಮನಿರ್ಭರ ಭಾರತ ಯೋಜನೆ ಯಶಸ್ವಿಯಾದಂತೆ. ಜೊತೆಗೆ ಕೆಲವು ವಿದೇಶೀ ರಾಷ್ಟ್ರಗಳೂ ಭಾರತದ ಈ ಶಸ್ತ್ರಾಸ್ತ್ರ ಕೊಳ್ಳಲು ಮುಂದೆ ಬರಬಹುದು. ಇದರಿಂದ ಭಾರತದ ಶಸ್ತ್ರಾಸ್ತ್ರ ಮಾರಾಟಕ್ಕೆ ಅನುಕೂಲವಾಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

Gruhalakshmi: ಮೂರು ತಿಂಗಳಿನಿಂದ ಬಂದಿಲ್ಲ ಗೃಹಲಕ್ಷ್ಮಿ ಹಣ: ವೋಟ್ ಹಾಕಲ್ಲ ಎಂದ ಮಹಿಳೆಯರು