Select Your Language

Notifications

webdunia
webdunia
webdunia
webdunia

Shocking video: ದುಪ್ಪಟ್ಟು ದರ ವಸೂಲಿ ಮಾಡುತ್ತಿರುವುದೇಕೆ ಪ್ರಶ್ನಿಸಿದ್ದಕ್ಕೆ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ ರೈಲು ಸಿಬ್ಬಂದಿ

Railway staff assault

Krishnaveni K

ಮುಂಬೈ , ಗುರುವಾರ, 8 ಮೇ 2025 (11:30 IST)
ಮುಂಬೈ: ದುಪ್ಪಟ್ಟ ದರ ವಸೂಲಿ ಮಾಡುತ್ತಿರುವುದು ಯಾಕೆ ಎಂದು ನಿರ್ವಹಣಾ ಸಿಬ್ಬಂದಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿದೆ.

ರಿಷಿಕೇಶದಿಂದ ವೈಷ್ಣೋದೇವಿವರೆಗೆ ತೆರಳುವ ಹೇಮಕುಂಟ್ ಎಕ್ಸ್ ಪ್ರೆಸ್ ರೈಲು ಸಂಖ್ಯೆ 14609 ರಲ್ಲಿ ಈ ಘಟನೆ ನಡೆದಿದೆ. ಎಸಿ ಕೋಚ್ ನಲ್ಲಿ ನಿರ್ವಹಣಾ ಸಿಬ್ಬಂದಿಯೊಬ್ಬ ತನ್ನ ಸಹ ಸಿಬ್ಬಂದಿಗಳೊಂದಿಗೆ ಸೇರಿಕೊಂಡು ಹಲ್ಲೆ ನಡೆಸಿದ್ದಾನೆ.

ಪ್ರಯಾಣಿಕ ಊಟಕ್ಕೆ ಆರ್ಡರ್ ಮಾಡಿದ್ದ. ಆದರೆ ಊಟದ ದರ ನಿಗದಿತ ದರಕ್ಕಿಂತ ದುಪ್ಪಟ್ಟು ವಸೂಲಿ ಮಾಡಲಾಗಿತ್ತು. ಇದನ್ನು ಆತ ಪ್ರಶ್ನೆ ಮಾಡಿದ್ದ. ಅಲ್ಲದೆ ಪ್ರಯಾಣಿಕ ವಿಡಿಯೋ ಮಾಡುತ್ತಿರುವುದನ್ನು ಗಮನಿಸಿದ ರೈಲ್ವೇ ಸಿಬ್ಬಂದಿ ರೊಚ್ಚಿಗೆದ್ದಿದ್ದ.

ತನ್ನ ಸಹ ಸಿಬ್ಬಂದಿಗಳನ್ನು ಕರೆಸಿಕೊಂಡು ಮೇಲಿನ ಬರ್ತ್ ನಲ್ಲಿದ್ದ ಪ್ರಯಾಣಿಕನ ಮೇಲೇರಿ ಹೊಡೆದಿದ್ದಾನೆ. ಈ ಘಟನೆಯಲ್ಲಿ ಪ್ರಯಾಣಿಕನಿಗೆ ಗಾಯಗಳಾಗಿವೆ. ಘಟನೆಯ ವಿಡಿಯೋ ವೈರಲ್ ಆಗಿದ್ದು, ರೈಲ್ವೇ ಇಲಾಖೆ ಇಂತಹ ಸಿಬ್ಬಂದಿ  ವಿರುದ್ಧ ಕ್ರಮ  ಕೈಗೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

Gold Price today: ಲಕ್ಷ ಗಡಿ ದಾಟಿದ್ದ ಚಿನ್ನ ಇಂದು ಮತ್ತಷ್ಟು ಏರಿಕೆ