Daily Horoscope

Select Your Language

Notifications

webdunia
webdunia
webdunia
webdunia

ಹೋಲಿ ದಹನವಲ್ಲ, ಈತನದ್ದೇ ದಹನವಾಗುತ್ತಿತ್ತು, ಜಸ್ಟ್ ಮಿಸ್: Viral video

Holi viral video
Photo Credit: X
ಹೋಲಿ ಹಬ್ಬದ ನಿಮಿತ್ತ ಹೋಲಿ ದಹನ ಮಾಡುವುದು ಬಿಟ್ಟು ಈತನದ್ದೇ ದಹನವಾಗುತ್ತಿತ್ತು. ಅದು ಕೂದಲೆಳೆಯ ಅಂತರದಲ್ಲಿ ಮಿಸ್ ಆಯ್ತು. ವೈರಲ್ ವಿಡಿಯೋ ಇಲ್ಲಿದೆ ನೋಡಿ.

ನಾವು ಭಾರತೀಯರೇ ಹಾಗೆ. ಹಬ್ಬ ಬಂತೆಂದರೆ ಮಿತಿ ಮೀರಿ ಸಂಭ್ರಮಾಚರಿಸುತ್ತೇವೆ. ಅದರಲ್ಲೂ ಹೋಳಿ ಹಬ್ಬವೆಂದರೆ ಕೇಳುವುದೇ ಬೇಡ. ಬಣ್ಣದೋಕುಳಿ ಎರಚುವುದು, ಹೋಳಿಕಾ ದಹನ ಮಾಡುವುದರಲ್ಲಿ ಒಂದು ಕೈ ಮೇಲೆಯೇ ಎನ್ನುವಂತಿರುತ್ತೇವೆ.

ಅದೇ ರೀತಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಜೋರಾಗಿ ಹಾಡು ಹಾಕಿಕೊಂಡು ಒಂದಷ್ಟು ಜನರ ಗುಂಪು ಬೆಂಕಿ ಹಚ್ಚಿ ಹೋಳಿಕಾ ದಹನ ಮಾಡಲು ಪ್ಲ್ಯಾನ್ ಮಾಡಿದ್ದರು. ಇದರ ನಡುವೆ ಓರ್ವ ವ್ಯಕ್ತಿ ಉರಿಯುತ್ತಿರುವ ಬೆಂಕಿ ಮೇಲೆ ಬೈಕ್ ಹತ್ತಿಸುವ ಹುಚ್ಚು ಸಾಹಸ ಮಾಡಿದ್ದಾನೆ.

ಒಮ್ಮೆ ಬೈಕ್ ಯಶಸ್ವಿಯಾಗಿ ಹಾಯಿಸುವ ವ್ಯಕ್ತಿ ಮತ್ತೆಅದೇ ಸಾಹಸ ಮಾಡಲು ಹೋದಾಗ ಬೆಂಕಿ ಮೇಲೆಯೇ ಬೈಕ್ ಸಮೇತ ಬೀಳುತ್ತಾನೆ. ಆತನ ಅದೃಷ್ಟಕ್ಕೆ ಆತನೇನೋ ಜೀವ ಉಳಿಸಿಕೊಂಡು ಬೆಂಕಿಯಿಂದ ಹೊರಬರುತ್ತಾನೆ. ಆದರೆ ಆತನ ಬೈಕ್ ಬೆಂಕಿಗೆ ಆಹುತಿಯಾಗುತ್ತದೆ. ಈತನ ಹುಚ್ಚು ಸಾಹಸಕ್ಕೆ ಹೋಳಿಕಾ ದಹನ ಹೋಗಿ ಈತನೇ ದಹನವಾಗುತ್ತಿದ್ದ. ದೇವರೇ ಕಾಪಾಡಿದ್ದ.

pic.twitter.com/TomI9GfAz8

 

— The Nalanda Index (@Nalanda_index) March 4, 2026

Share this Story:

Follow Webdunia kannada

ಮುಂದಿನ ಸುದ್ದಿ

ಲಿಫ್ಟ್ ನಲ್ಲಿದ್ದ ವ್ಯಕ್ತಿಗೆ ಹೊರಹೋಗುವಾಗ ಆಗಿದ್ದೇನು: ಎದೆ ನಡುಗಿಸುವಂತಹಾ ದೃಶ್ಯ Video