Daily Horoscope

Select Your Language

Notifications

webdunia
webdunia
webdunia
webdunia

ಹೋಳಿ ಆಚರಣೆ ನೆಪದಲ್ಲಿ ಗೋವಿಗೆ ಬಲವಂತವಾಗಿ ಹೆಂಡ ಕುಡಿಸಿದ ದುರುಳರು Video

Cow viral video
Photo Credit: X
ಹೋಳಿ ಹಬ್ಬದ ಆಚರಣೆ ನೆಪದಲ್ಲಿ ಗೋವಿಗೆ ಚಿತ್ರಹಿಂಸೆ ಕೊಟ್ಟು ಹೆಂಡ ಕುಡಿಸುತ್ತಿರುವ ಕಿಡಿಗೇಡಿಗಳ ಕೃತ್ಯದ  ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೋಳಿ ಹಬ್ಬದ ನೆಪದಲ್ಲಿ ಕೆಲವರು ಅತಿರೇಕದ ವರ್ತನೆ ತೋರುವುದಿದೆ. ಹೋಳಿ ಬಣ್ಣದೋಕುಳಿ ಆಡುವಾಗ ಪ್ರಾಣಿಗಳಿಗೆ ಹಿಂಸೆ ಮಾಡಬೇಡಿ ಎಂದು ಎಷ್ಟೇ ಮನವಿ ಮಾಡಿದರೂ ಕೆಲವರು ಮತ್ತೆ ಮತ್ತೆ ಅದೇ ತಪ್ಪನ್ನೇ ಮಾಡುತ್ತಾರೆ. ನಮ್ಮ ಹಬ್ಬದ ಆಚರಣೆ ನೆಪದಲ್ಲಿ ಮೂಕ ಪ್ರಾಣಿಗಳಿಗೆ ಯಾಕೆ ಚಿತ್ರ ಹಿಂಸೆ ಕೊಡಬೇಕು?

ಇದೇ ರೀತಿ ಹರ್ಯಾಣದಲ್ಲಿ ಇಂತಹದ್ದೇ ಕ್ರೂರ ಘಟನೆಯೊಂದು ನಡೆದಿರುವುದು ವರದಿಯಾಗಿದೆ. ಒಂದಷ್ಟು ಯುವಕರ ಗುಂಪು ಹೋಳಿ ಹಬ್ಬದ ಆಚರಣೆಯಲ್ಲಿ ತೊಡಗಿಕೊಂಡಿತ್ತು. ಮೈ ಇಡೀ ಬಣ್ಣ ಕೈಯಲ್ಲಿ ಹೆಂಡದ ಬಾಟಲಿ.

ಹಬ್ಬದ ಆಚರಣೆ ನೆಪದಲ್ಲಿ ಅತಿರೇಕದ ವರ್ತನೆ ತೋರಿದ ಈ ಯುವಕರ ಗುಂಪು ಕೈಯಲ್ಲಿದ್ದ ಮದ್ಯದ ಬಾಟಲಿಯನ್ನು ಅಲ್ಲೇ ಇದ್ದ ಹಸುವಿನ ಬಾಯಿ ಬಲವಂತವಾಗಿ ತೆರೆಸಿ ಹೆಂಡ ಕುಡಿಸಿದ್ದಾರೆ. ಈ ವಿಡಿಯೋಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದ್ದು ಪ್ರಾಣಿದಯಾ ಸಂಘಗಳು, ಸರ್ಕಾರ ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.


pic.twitter.com/bSmZ2eHVYe

 

— Believer (@PredatorVolk) March 3, 2026

Share this Story:

Follow Webdunia kannada

ಮುಂದಿನ ಸುದ್ದಿ

ಇರಾನ್ ನಿಂದ ನಮ್ಮ ಬೆಂಗಳೂರಿಗೆ ಯಾವೆಲ್ಲಾ ವಸ್ತುಗಳು ಬರುತ್ತವೆ ಗೊತ್ತಾ