Publish Date: Mon, 02 Mar 2026 (11:37 IST)
Updated Date: Mon, 02 Mar 2026 (11:42 IST)
ನವದೆಹಲಿ: ಇರಾನ್ ನ ಪರಮೋಚ್ಛ ನಾಯಕ ಖಮೇನಿ ಸಾವಿಗೆ ಭಾರತದಲ್ಲೂ ಕೆಲವರು ವಿಷಾಧ ವ್ಯಕ್ತಪಡಿಸಿದ್ದಾರೆ. ಆದರೆ ಇಲ್ಲೊಬ್ಬ ಬಾಲಕ ನಮಗೆ ಖಮೇನಿಯೇ ಬಾಸ್, ಅವರನ್ನು ಕೊಲ್ಲಲು ಹೇಳಿದ್ದು ಮೋದಿಯೇ ಎಂದು ಹೇಳುತ್ತಿರುವ ವಿಡಿಯೋ ವೈರಲ್ ಆಗಿದೆ.
ಇಸ್ರೇಲ್-ಅಮೆರಿಕಾ ನಡೆಸಿದ ದಾಳಿಯಲ್ಲಿ ಇರಾನ್ ನ ಪರಮೋಚ್ಛ ನಾಯಕ ಖಮೇನಿ ಮತ್ತು ಆತನ ಕುಟುಂಬಸ್ಥರು ಸಾವನ್ನಪ್ಪಿದ್ದಾರೆ. ಇದರ ಬೆನ್ನಲ್ಲೇ ಪ್ರಪಂಚದಾದ್ಯಂತ ಖಮೇನಿ ಅನುಯಾಯಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ಪೈಕಿ ಭಾರತದಲ್ಲೂ ಕೆಲವರು ಖಮೇನಿ ಪರ ಮಾತನಾಡಿದವರು ಇದ್ದಾರೆ.
ಆದರೆ ಎಲ್ಲಕ್ಕಿಂತ ಹೆಚ್ಚು ಶಾಕಿಂಗ್ ಎಂದರೆ ಈ ಬಾಲಕನ ಮಾತುಗಳು. ಒಬ್ಬ ಪತ್ರಕರ್ತೆ ಈ ಬಾಲಕನ ಬಳಿ ಖಮೇನಿ ಹತ್ಯೆ ಬಗ್ಗೆ ಮಾತನಾಡಿಸುತ್ತಾರೆ. ಆತ ನಾವು ದೊಡ್ಡವರಾದ ಮೇಲೆ ಇಸ್ರೇಲಿಗರ ಎದೆ ಸೀಳುತ್ತೇವೆ, ಏನು ಬೇಕಾದರೂ ಆಗಲಿ. ಅದಕ್ಕಾಗಿ 20 ವರ್ಷ ಜೈಲಿಗೆ ಹೋದರೂ ಸರಿಯೇ ಎನ್ನುತ್ತಾನೆ.
ಇದಕ್ಕೆ ಸಂದರ್ಶಕಿ ಇಂತಹದ್ದೇ ಘಟನೆ ಭಾರತದಲ್ಲಿ ನಡೆದರೆ ಏನು ಮಾಡುತ್ತೀರಿ ಎಂದು ಕೇಳಿದ್ದಾರೆ. ಅದಕ್ಕೆ ಈ ಬಾಲಕ ಹೇಳಿದ ಉತ್ತರ ಶಾಕಿಂಗ್ ಆಗಿದೆ. ಇದೆಲ್ಲಾ ಮಾಡಿದ್ದು ಭಾರತವೇ. ಮೋದಿ ಇಸ್ರೇಲ್ ಗೆ ಹೋಗಿ ನೆತನ್ಯಾಹುಗೆ ಖಮೇನಿ ಇರುವ ಜಾಗದ ಮಾಹಿತಿ ನೀಡಿದ್ರು. ಹಾಗಾಗಿಯೇ ನಮ್ಮ ಬಾಸ್ ಖಮೇನಿ ಸತ್ರು ಎನ್ನುತ್ತಾರೆ.
ಇದಕ್ಕೆ ಪತ್ರಕರ್ತೆ ನೀನು ಖಮೇನಿಗಾಗಿ ಅಳುತ್ತೀಯಾ ಎಂದು ಕೇಳಿದ್ದಾರೆ. ಆತ ಹೌದು ಎನ್ನುತ್ತಾನೆ. ಮೋದಿಗಾಗಿ ಅಳುತ್ತೀಯಾ ಎಂದು ಸಂದರ್ಶಕಿ ಕೇಳುತ್ತಾಳೆ. ಅದಕ್ಕೆ ಆತ ಇಲ್ಲ ಯಾಕೆ ಅಳಬೇಕು? ಮೋದಿ ನಮಗೆ ಯಾರೂ ಅಲ್ಲ. ನಾವ್ಯಾಕೆ ಅವರಿಗಾಗಿ ಅಳಬೇಕು ಎಂದು ಪ್ರಶ್ನಿಸುತ್ತಾನೆ. ಈ ವಿಡಿಯೋ ನೋಡಿ ನೆಟ್ಟಿಗರು ಕಾಮೆಂಟ್ ಮಾಡಿದ್ದು ಈ ಬಾಲಕರ ತಲೆಯಲ್ಲಿ ಇಂತಹ ವಿಷಕಾರೀ ಬೀಜ ಬಿತ್ತುವವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.