Select Your Language

Notifications

webdunia
webdunia
webdunia
webdunia

ಲಿಫ್ಟ್ ನಲ್ಲಿದ್ದ ವ್ಯಕ್ತಿಗೆ ಹೊರಹೋಗುವಾಗ ಆಗಿದ್ದೇನು: ಎದೆ ನಡುಗಿಸುವಂತಹಾ ದೃಶ್ಯ Video

Lift viral video
Photo Credit: X
ಅಹ್ಮದಾಬಾದ್: ಲಿಫ್ಟ್ ನಲ್ಲಿದ್ದ ವ್ಯಕ್ತಿ ತನ್ನ ಮಹಡಿ ಬಂತು ಎಂದು ಹೊರಗೆ ಹೋಗಲು ಯತ್ನಿಸಿದಾಗ ಏನಾಯ್ತು ಎಂದು ನೋಡಿದರೆ ನೀವು ನಿಜಕ್ಕೂ ಶಾಕ್ ಆಗ್ತೀರಿ. ಈ ಶಾಕಿಂಗ್ ವಿಡಿಯೋ ಇಲ್ಲಿದೆ ನೋಡಿ.

ಲಿಫ್ಟ್ ಎಷ್ಟು ಅಪಾಯಕಾರಿ ಎಂದು ಸಾಬೀತುಪಡಿಸುವಂತಹ ಅನೇಕ ಘಟನೆಗಳು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತವೆ. ತಾಂತ್ರಿಕ ಸಮಸ್ಯೆಯಾಗಿ ಲಿಫ್ಟ್ ಒಳಗೇ ಬಾಕಿಯಾಗಿ ಉಸಿರಾಟಕ್ಕೂ ಕಷ್ಟಪಡುವಂತಹ ಅನೇಕ ಘಟನೆಗಳನ್ನು ನೋಡಿದ್ದೇವೆ. ಆದರೆ ಇಲ್ಲಿ ನಡೆದಿರುವುದು ಮಾತ್ರ ವಿಪರ್ಯಾಸ.

ಗುಜರಾತ್ ನ ವಲ್ಸದ್ ನಲ್ಲಿರುವ ಸರ್ದಾರ್ ಹೈಟ್ಸ್ ವಸತಿ ಸಮುಚ್ಚಯದಲ್ಲಿ ನಡೆದ ಘಟನೆ ಇದಾಗಿದೆ. ಓರ್ವ ಮಧ್ಯ ವಯಸ್ಸಿನ ವ್ಯಕ್ತಿ ಏಕಾಂಗಿಯಾಗಿ ಲಿಫ್ಟ್ ನೊಳಗೆ ಬರುತ್ತಾರೆ. ತಾನು ಹೋಗಬೇಕಾಗರುವ ಫ್ಲೋರ್ ಬಟನ್ ಪ್ರೆಸ್ ಮಾಡಿ ಆ ವ್ಯಕ್ತಿ ಕಾಯುತ್ತಿರುತ್ತಾರೆ.

ಅವರ ಮಹಡಿ ಬಂದಾಗ ಲಿಫ್ಟ್ ಬಾಗಿಲು ಓಪನ್ ಆಗುತ್ತದೆ. ಇನ್ನೇನು ಅವರು ಹೊರಗೆ ಕಾಲಿಡಬೇಕು ಎನ್ನುವಷ್ಟರಲ್ಲಿ ಮೇಲಿನಿಂದ ಬಾಗಿಲು ತಲೆ ಮೇಲೆ ಬಿದ್ದು ಅವರು ಕೆಳಗೆ ತಳ್ಳಲ್ಪಡುತ್ತಾರೆ. ಈಗಿನ ಮಾಹಿತಿ ಪ್ರಕಾರ ಆ ವ್ಯಕ್ತಿಯನ್ನು ರಕ್ಷಿಸಲಾಗಿದೆ. ಆದರೆ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.




pic.twitter.com/176zIC8yIL

 

— Divya Gandotra Tandon (@divya_gandotra) March 3, 2026

Share this Story:

Follow Webdunia kannada

ಮುಂದಿನ ಸುದ್ದಿ

ಖಮೇನಿ ಹತ್ಯೆ ಬಗ್ಗೆ ಪೋಸ್ಟ್ ಮಾಡಿದ್ದಕ್ಕೆ ಹಿಂದೂ ಯುವಕನ ಮೇಲೆ ಅನ್ಯಕೋಮಿನ ಯುವಕರಿಂದ ಹಲ್ಲೆ