Publish Date: Thu, 20 Jan 2022 (09:00 IST)
Updated Date: Thu, 20 Jan 2022 (09:41 IST)
ಲಕ್ನೋ: ಗೆಳಯರಿಬ್ಬರೂ ಮದ್ಯ ಕುಡಿಯಲು ಬಾರ್ ಗೆ ಹೋಗಿದ್ದರು. ಅಲ್ಲಿ ಕಂಠಪೂರ್ತಿ ಕುಡಿದಾದ ಮೇಲೆ ಬಿಲ್ ಕೊಡುವ ಸರತಿ ಬಂದಾಗಿ ಆಗಿದ್ದೇ ಬೇರೆ.
ಬಿಲ್ ಕೇಳಲು ಬಂದ ಬಾರ್ ಮಾಲಿಕನ ಹೆಬ್ಬರಳನ್ನು ಕಚ್ಚಿ ಗೆಳೆಯರಿಬ್ಬರು ವಿಕೃತಿ ಮರೆದಿದ್ದಾರೆ. ಬಿಲ್ ವಿಚಾರಕ್ಕೆ ಬಾರ್ ಮಾಲಿಕರೊಂದಿಗೆ ಗೆಳೆಯರು ಕಿತ್ತಾಡಿದ್ದಾರೆ. ಬಳಿಕ ಬೆರಳು ಕಚ್ಚಿ ಹಲ್ಲೆ ಮಾಡಿದ್ದಾರೆ.
ಬಾರ್ ಮಾಲಿಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ಈ ದಾಂಧಲೆಗೆ ಕಾರಣವಾದ ಇಬ್ಬರು ಗೆಳೆಯರನ್ನೂ ಬಂಧಿಸಲಾಗಿದೆ.