Select Your Language

Notifications

webdunia
webdunia
webdunia
webdunia

ಹಣಕ್ಕಾಗಿ ಸ್ನೇಹವನ್ನೇ ಮರೆತಳು! ಮುಂದೇನಾಯ್ತು?

ಹಣಕ್ಕಾಗಿ ಸ್ನೇಹವನ್ನೇ ಮರೆತಳು! ಮುಂದೇನಾಯ್ತು?
ಮುಂಬೈ , ಗುರುವಾರ, 20 ಜನವರಿ 2022 (08:34 IST)
ಮುಂಬೈ : ಹಣದ ಆಸೆಗಾಗಿ ಮಹಿಳೆಯೊಬ್ಬರು ಗೆಳತಿಯನ್ನೇ ಕೊಲೆ ಮಾಡಿದ ಘಟನೆ ಮಹಾರಾಷ್ಟ್ರದ ವಿಜಯಾ ತಿಲಕ್ ಚೌಕ್ನಲ್ಲಿ ನಡೆದಿದೆ.

ಸೀಮಾ ಖೋಪಡೆ (58) ಆರೋಪಿ. ಇವರು ಡೊಂಬಿವಿಲಿ (ಪೂರ್ವ) ಕೊಳಗೇರಿಯ ನಿವಾಸಿ. ವಿಜಯಾ ಬಾವಿಸ್ಕರ್ (58) ಮೃತ ಮಹಿಳೆ. ವಿಜಯ ಹಾಗೂ ಸೀಮಾ ಕಳೆದ 18 ವರ್ಷಗಳಿಂದ ಸ್ನೇಹಿತರಾಗಿದ್ದರು. ವಿಜಯಾ ಪತಿಯಿಂದ ವಿಚ್ಛೇದನ ಪಡೆದಿದ್ದರು. ಇದರಿಂದಾಗಿ ವಿಜಯಾ ತಿಲಕ್ ಚೌಕ್ನಲ್ಲಿರುವ ಆನಂದ್ ಶೀಲಾ ಕಟ್ಟಡದಲ್ಲಿರುವ ಫ್ಲಾಟ್ನಲ್ಲಿ ವಾಸಿಸುತ್ತಿದ್ದರು.

ವಿಜಯಾ ಅವರ ಕುಟುಂಬಸ್ಥರು ಮನೆಗೆ ಹೋಗಿದ್ದ ಸಂದರ್ಭದಲ್ಲಿ ಅವರೊಬ್ಬರೇ ಇರುವುದನ್ನು ತಿಳಿದು ತಡರಾತ್ರಿ ಸೀಮಾ ಅವರ ಮನೆಗೆ ಹೋಗಿದ್ದಾರೆ. ಅಲ್ಲಿ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಿ ಅವರ ಮನೆಯಲ್ಲಿದ್ದ ಚಿನ್ನಾಭರಣವನ್ನು ದರೋಡೆ ಮಾಡಿದ್ದಾರೆ. 

ಪ್ರಕರಣ ಸಂಬಂಧ ಥಾಣೆ ಪೊಲೀಸರು, ಮೃತ ಮಹಿಳೆ ವಿಜಯಾ ಅವರ ಹೆಸರಲ್ಲಿ ಸಾಕಷ್ಟು ಆಸ್ತಿ ಇರುವುದರಿಂದ ಆಸ್ತಿಯ ಆಸೆಗಾಗಿ ಅವರನ್ನು ಕೊಲೆ ಮಾಡಿರಬಹುದು ಎಂಬ ಶಂಕಿಸಿದ್ದರು. ಆದರೆ ವಿಜಯಾ ಅವರ ಕರೆಗಳ ವಿವರ ಹಾಗೂ ಸಿಸಿ ಕ್ಯಾಮರಾ ದೃಶ್ಯಾವಳಿಯನ್ನು ವೀಕ್ಷಿಸಿದ ನಂತರ, ವಿಜಯಾಳನ್ನು ಆರೋಪಿ ಸೀಮಾ ಕೊಲೆ ಮಾಡಿರುವುದಾಗಿ ತಿಳಿದಿದೆ. 

ಈ ಸಂಬಂಧ ಪೊಲೀಸ್ ಆರೋಪಿ ಸೀಮಾರನ್ನು ವಶಕ್ಕೆ ಪಡೆದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾರ್ಥಿಗೆ ಹೊಡೆದ ಶಿಕ್ಷಕಿಗೆ ಜೈಲು ಶಿಕ್ಷೆ!