Select Your Language

Notifications

webdunia
webdunia
webdunia
webdunia

ಬಾಲಕಿಯ ನಂಬಿಸಿ ಗಂಡನ ಬಳಿ ಕರೆದುಕೊಂಡು ಹೋಗಿ ಬಿಟ್ಟಳು!

ಬಾಲಕಿಯ ನಂಬಿಸಿ ಗಂಡನ ಬಳಿ ಕರೆದುಕೊಂಡು ಹೋಗಿ ಬಿಟ್ಟಳು!
ಉತ್ತರ ಪ್ರದೇಶ , ಸೋಮವಾರ, 16 ಆಗಸ್ಟ್ 2021 (16:33 IST)
ಕೌಶಂಬಿ(ಉತ್ತರ  ಪ್ರದೇಶ) (ಆ. 16):  ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ದಂಪತಿ ವಿರುದ್ಧ ಪ್ರಕರಣ ದಾಖಲಾಗಿದೆ. 16 ವರ್ಷದ ಬಾಲಕಿಯ ಮೇಲೆ ಈ ಪಾಪಿ ಪುರುಷ ತನ್ನ ಪತ್ನಿಯ ಎದುರಿನಲ್ಲೇ ಅತ್ಯಾಚಾರ ಎಸಗಿದ್ದಾನೆ.

ಪಶ್ಚಿಮ ಸರೀರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಾಲಕಿಯ ತಾಯಿ ದೂರು ದಾಖಲಿಸಿದ್ದಾರೆ.  ಮಹಿಳೆಯೊಬ್ಬಳು ಬಾಲಕಿಯನ್ನು ನಂಬಿಸಿ ಕರೆದುಕೊಂಡು ಹೋಗಿ ಜನವರಿ 14  ರಂದು ತನ್ನ ಗಂಡನಿಗೆ ಒಪ್ಪಿಸಿದ್ದಳು.
ಗಂಡನ ಅತ್ಯಾಚಾರಕ್ಕೆ ಪತ್ನಿಯೂ ಸಾಥ್ ನೀಡಿದ್ದು ಇಬ್ಬರ ಮೇಲೆ ಪ್ರಕರಣ ದಾಖಲಾಗಿದೆ.  ಸ್ಥಳೀಯ ಠಾಣೆಯಲ್ಲಿ ದೂರು ನೀಡಿದರೂ ಪೊಲೀಸರು ಯಾವುದೆ ಕ್ರಮ ತೆಗೆದುಕೊಳ್ಳಲಿಲ್ಲ.  ಹಾಗಾಗಿ ಸಂತ್ರಸ್ತ ಬಾಲಕಿಯ ಕುಟುಂಬ ನ್ಯಾಯಾಲಯದ ಮೊರೆ ಹೋಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಸ್ಟೇಷನ್ ಹೌಸ್ ಆಫೀಸರ್ (Sಊಔ) ಸರ್ವೇಶ್ ಸಿಂಗ್ ನ್ಯಾಯಾಲಯದ ಆದೇಶದನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ. ಬಾಲಕಿಯನ್ನು ವೈದ್ಯಕೀಯ ತಪಸಾಸಣೆಗೆ ಕಳುಹಿಸಲಾಗಿದ್ದು  ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಶೇ.57 ಭಾರತೀಯರಿಗೆ ವರ್ಕ್ ಫ್ರಮ್ ಹೋಮ್ನಲ್ಲಿ ಹೆಚ್ಚು ಕೆಲಸದ ಭಾರ; ಸಮೀಕ್ಷಾ ವರದಿ!