Select Your Language

Notifications

webdunia
webdunia
webdunia
webdunia

ನಾಳೆ ವರ್ಷದ ಮೊದಲ ಸೂರ್ಯ ಗ್ರಹಣ: ಭಾರತದಲ್ಲಿ ಗೋಚರವಿದೆಯೇ ನೋಡಿ

Sun eclipse

Krishnaveni K

ಬೆಂಗಳೂರು , ಶುಕ್ರವಾರ, 28 ಮಾರ್ಚ್ 2025 (16:00 IST)
ಬೆಂಗಳೂರು: ನಾಳೆ 2025 ರ ಮೊದಲ ಸೂರ್ಯ ಗ್ರಹಣವಾಗಲಿದೆ. ನಾಳೆ ಸೂರ್ಯಗ್ರಹಣವಿದ್ದು, ಭಾರತದಲ್ಲಿ ಗೋಚರವಾಗಲಿದೆಯೇ ಎಂಬ ಮಾಹಿತಿ ಇಲ್ಲಿದೆ ನೋಡಿ.

ಮಾರ್ಚ್ 14 ರಂದು ಚಂದ್ರಗ್ರಹಣವಾಗಿತ್ತು. ಇದು ಭಾರತದಲ್ಲಿ ಮೊದಲ ಗ್ರಹಣವಾಗಿತ್ತು. ಇದೀಗ ನಾಳೆ ಮಾರ್ಚ್ 29 ರಂದು ಚೈತ್ರ ಮಾಸದ ಆರಂಭಕ್ಕೆ ಮೊದಲು ಗ್ರಹಣ ಸಂಭವಿಸಲಿದೆ. ಆದರೆ ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ.

ಭಾರತೀಯ ಕಾಲಮಾನ ಪ್ರಕಾರ ಈ ಗ್ರಹಣ ಮಧ್ಯಾಹ್ನ 2.20 ಕ್ಕೆ ಆರಂಭವಾಗಿ ಸಂಜೆ 6.16 ಕ್ಕೆ ಕೊನೆಯಾಗಲಿದೆ. ಇದು ಪಾಲ್ಗುಣ ಮಾಸದ ಕೃಷ್ಣ ಪಕ್ಷದ ಅಮವಾಸ್ಯೆಯಂದು ಸಂಭವಿಸುವ ಭಾಗಶಃ ಗ್ರಹಣವಾಗಿದೆ.

ಆಸ್ಟ್ರಿಯಾ, ಬೆಲ್ಜಿಯಂ, ಉತ್ತರ ಬ್ರೆಜಿಲ್, ಡೆನ್ಮಾರ್ಕ್, ಫ್ರಾನ್ಸ್, ಹಂಗೇರಿ, ಐರ್ಲೆಂಡ್, ಮೊರಾಕೊ, ಜರ್ಮನಿ, ಫಿನ್ ಲ್ಯಾಂಡ್, ರಷ್ಯಾ, ಸ್ಪೇನ್, ಪೂರ್ವ ಕೆನಡಾ, ಸ್ವೀಡನ್, ಪೊಲೆಂಡ್, ಪೋರ್ಚುಗಲ್, ಅಮೆರಿಕಾದ ಕೆಲವು ಪ್ರದೇಶಗಳು, ಇಂಗ್ಲೆಂಡ್, ಸ್ವಿಜರ್ ಲ್ಯಾಂಡ್ ಸೇರಿದಂತೆ ಕೆಲವು ದೇಶಗಳಲ್ಲಿ ಮಾತ್ರ ಈ ಗ್ರಹಣ ಗೋಚರವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹನಿಟ್ರ್ಯಾಪ್, ಕೊಲೆ ಸುಪಾರಿಯ ಖಳನಾಯಕ ಯಾರು: ಆರ್‌ ಅಶೋಕ್ ಪ್ರಶ್ನೆ