ನವದೆಹಲಿ: ಈಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಇಂದು ಸಂಸತ್ತಿನಲ್ಲಿ ನಡೆಯುತ್ತಿರುವ 18 ನೇ ಲೋಕಸಭಾ ಅಧಿವೇಶನಕ್ಕೆಗೆ ಪತ್ನಿ ಶಿವಶ್ರೀ ಸ್ಕಂದಕುಮಾರ್ ಜತೆ ಆಗಮಿಸಿದರು.
ಮದುವೆ ಬಳಿಕ ಮೊದಲ ಬಾರಿ ತೇಜಸ್ವಿ ಸೂರ್ಯ ಅವರು ತಮ್ಮ ಪತ್ನಿ ಜತೆ ಸಂಸತ್‌ನಲ್ಲಿ ಕಾಣಿಸಿಕೊಂಡರು.
ಮಾರ್ಚ್ 6 ರಂದು ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಅವರನ್ನು ತೇಜಸ್ವಿ ಸೂರ್ಯ ವಿವಾಹವಾದರು. ಮದುವೆ ಸಮಾರಂಭದಲ್ಲಿ ರಾಜಕೀಯ ಮುಖಂಡರು, ಸಿನಿಮಾ ರಂಗದವರು ಭಾಗವಹಿಸಿದ್ದರು.
ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಕೇಂದ್ರ ಸಚಿವರಾದ ವಿ ಸೋಮಣ್ಣ ಮತ್ತು ಅರ್ಜುನ್ ರಾಮ್ ಮೇಘವಾಲ್ ಸೇರಿದಂತೆ ಹಲವಾರು ಉನ್ನತ ಬಿಜೆಪಿ ನಾಯಕರು, ಹಾಗೆಯೇ ಬಿಜೆಪಿ ಸಂಸದರು ಮತ್ತು ಶಾಸಕರು ಸಮಾರಂಭದಲ್ಲಿ ಭಾಗವಹಿಸಿ ದಂಪತಿಗಳನ್ನು ಆಶೀರ್ವದಿಸಿದರು.